ಮಂಗಳೂರು ರೈಲು ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ

Update: 2019-01-15 16:19 GMT

ಮಂಗಳೂರು, ಜ.15: ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್ ಆವರಣದಲ್ಲಿ ಅಪರಿಚಿತ ವ್ಯಕ್ತಿಯು ಮಲಗಿದಲ್ಲಿಯೇ ಮೃತಪಟ್ಟಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

ಚಹರೆ: ಎಣ್ಣೆಕಪ್ಪುಮೈಬಣ್ಣ, ಕೋಲುಮುಖ, ಕುರುಚಲು ಕಪ್ಪು ಕೂದಲು ಮತ್ತು ದಪ್ಪ ಗಡ್ಡ ಇರುತ್ತದೆ. ಉದ್ದತೊಳಿನ ಕಪ್ಪುಶರ್ಟ್ ಮತ್ತು ಕೇಸರಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಬಲಕೈ ಮಧ್ಯ ಬೆರಳಿನಲ್ಲಿ ಬೆಳ್ಳಿಯಂತೆ ಕಾಣುವ ಉಂಗುರ ಧರಿಸಿರುತ್ತಾನೆ. ಈ ರೀತಿಯ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಕಂಕನಾಡಿ ನಗರ ಠಾಣೆಗೆ (0824- 2220529, 9480805354) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News