ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ಶಿಕ್ಷಕರ ಸಂಘ, ರೆಡ್ ಕ್ಯಾಮ್ ಇಸ್ಲಾಮಿಕ್ ಶಾಲೆಗೆ ಪದಕ

Update: 2019-01-15 17:37 GMT

ಮೂಡುಬಿದಿರೆ, ಜ. 15: ಶೊರಿನ್ ರಿಯೂ ಕರಾಟೆ ಅಸೋಸಿಯೇಶನ್ ಗಂಜಿಮಠದ ವಂಡೇಲಾ ಭವನದಲ್ಲಿ ಶನಿವಾರ ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘವು ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಮಂಗಳೂರಿನ ರೆಡ್ ಕ್ಯಾಮ್ ಇಸ್ಲಾಮಿಕ್ ಶಾಲೆಯು ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಹಲವು ಪದಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಉತ್ತಮ ಕರಾಟೆ ತಂಡವಾಗಿ ಮೂಡಿ ಬಂದಿರುವುದಲ್ಲದೆ ರನ್ನರ್ಸ್ ಅಫ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

9 ರಾಜ್ಯಗಳ ಸುಮಾರು 900 ಕರಾಟೆಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಮೂಡುಬಿದಿರೆ ಪ್ರೆಸ್‍ಕ್ಲಬ್ ಮಾಜಿ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್, ರವಿ ಸಾಲ್ಯಾನ್, ಸರ್ಫರಾಝ್, ರಹಿಮಾನ್ ಉಪಸ್ಥಿತರಿದ್ದರು.

ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಸ್ಪರ್ಧೆಯನ್ನು ಉದ್ಘಾಟಿಸಿದ್ದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶೊರಿನ್ ರಿಯೂ ಕರಾಟೆ ಅಸೋಸಿಯೇಶನ್‍ನ ಮುಖ್ಯ ಶಿಕ್ಷಕ ಶಿಹಾನ್ ನದೀಂ ಹಾಗೂ ರಾಜೇಶ್ ಸ್ಪರ್ಧೆಯನ್ನು ಸಂಘಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News