ಚಂಡೀಗಢನ ಸೆಮಿಕಂಡಕ್ಟರ್ ಲ್ಯಾಬೋರೆಟರಿ-ಆಳ್ವಾಸ್ ಇನ್ಸ್ಟಿಟ್ಯೂಟ್ ನಡುವೆ ಒಡಂಬಡಿಕೆ

Update: 2019-01-15 17:39 GMT

ಮೂಡುಬಿದಿರೆ, ಜ. 15: ಚಂಡೀಗಢನ ಸೆಮಿಕಂಡಕ್ಟರ್ ಲ್ಯಾಬೋರೆಟರಿ (ಎಸ್‍ಸಿಎಲ್) ಹಾಗೂ ಮೂಡಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‍ಮೆಂಟ್ ಸಂಸ್ಥೆ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಳ್ಳಲು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮತ್ತು  ವಿದ್ಯಾರ್ಥಿಗಳ ವಿನಿಮಯಕ್ಕಾಗಿ ಒಡಂಬಡಿಕೆ ಪತ್ರವೊಂದಕ್ಕೆ ಸಹಿ ಹಾಕಿವೆ.

ಈ ಒಡಂಬಡಿಕೆಯು ಶೈಕ್ಷಣಿಕ ಪಾಲುದಾರರ ಶಿಕ್ಷಣ ಮತ್ತು ಸಂಶೋಧನಾ ಪ್ರಕಟಣೆಗಳ ಪಾಂಡಿತ್ಯಪೂರ್ಣ ವಿನಿಮಯ, ಸಹಕಾರ ಮತ್ತು ತಾಂತ್ರಿಕ ವಿನಿಮಯವನ್ನು ಉತ್ತೇಜಿಸಲು ಮಹತ್ವಪೂರ್ಣ ಸಹಯೋಗವನ್ನು ಕಲ್ಪಿಸಲಿದೆ. ಈ ಒಪ್ಪಂದದ ಪ್ರಕಾರ  ಕಾರ್ಯಾಗಾರಗಳು, ಸಮಾವೇಶಗಳು, ವಿಚಾರಗೋಷ್ಠಿಗಳು, ವಿನ್ಯಾಸ ಕೌಶಲ್ಯಗಳನ್ನು, ಅಭಿವೃದ್ಧಿಪಡಿಸುವಲ್ಲಿ ತಾಂತ್ರಿಕ ತರಬೇತಿ ಮತ್ತು ಇತ್ತೀಚಿನ ಸಂಶೋಧನಾ ವಿಷಯಗಳ ಬಗ್ಗೆ ಆಹ್ವಾನಿತ ಮಾತುಕತೆಗಳು ನಡೆಯಲಿವೆ.

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‍ಮೆಂಟ್ ಸಂಸ್ಥೆಯಲ್ಲಿ ವಿಎಲ್‍ಎಸ್‍ಐ ಚಿಪ್ ನ ವಿನ್ಯಾಸ ಕಾರ್ಯವನ್ನು ಕೈಗೊಳ್ಳಲಾ ಗುವುದು ಮತ್ತು ಅದರ ರಚನೆಯು ಎಸ್‍ಸಿಎಲ್ ಚಂಡೀಗಢನಲ್ಲಿ ನಡೆಯಲಿದೆ. ಎಐಇಟಿ ವಿದ್ಯಾರ್ಥಿಗಳು ಚಂಡೀಗಢ ಘಟಕದಲ್ಲಿ ಕೆಲಸ ಮಾಡಲು ನಿಯಮಿತವಾಗಿ ಎಸ್‍ಸಿಎಲ್ ಅನ್ನು ಭೇಟಿ ಮಾಡಲಿದ್ದಾರೆ.

ಈ ಒಪ್ಪಂದವು ಎಸ್‍ಸಿಎಲ್‍ನ ನಿರ್ದೇಶಕ ಸುರೀಂದರ್ ಸಿಂಗ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಜೊತೆಗೆ ಎಐಇಟಿಯ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್, ಎಐಇಟಿಯ ಪ್ರೊಫೆಸರ್,  ಡಾ. ಪ್ರವೀಣ್ ಜೆ, ಮತ್ತು ಎಸ್‍ಸಿಎಲ್‍ನ ಗ್ರೂಪ್ ಹೆಡ್-ಪ್ರಾಜೆಕ್ಟ್ ಪ್ಲಾನಿಂಗ್ ಗ್ರೂಪ್,  ಸಂಜಯ್ ಭಟ್ನಾಗರ್, ಇವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಚಂಡೀಘಡ್‍ನ ಸೆಮಿಕಂಡಕ್ಟರ್ ಲ್ಯಾಬೋರೇಟರಿಯಲ್ಲಿ ನಡೆಯಿತು.

ಎಐಇಟಿಯ ಪ್ರೊಫೆಸರ್ ಡಾ. ಪ್ರವೀಣ್ ಜೆ ಮತ್ತು ಗ್ರೂಪ್ ಹೆಡ್ ಪ್ರಾಜೆಕ್ಟ್ ಪ್ಲಾನಿಂಗ್ ಗ್ರೂಪ್ ಎಸ್‍ಸಿಎಲ್‍ನ ಸಂಜಯ್ ಭಟ್ನಾಗರ್ ಎಐಇಟಿ ಮತ್ತು ಎಸ್‍ಸಿಎಲ್ ನಡುವಿನ ಸಂಪರ್ಕ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೆಮಿಕಂಡಕ್ಟರ್ ಲ್ಯಾಬೊರೇಟರಿ ಚಂಡೀಗಢ್ ಇದು  ಭಾರತ ಸರ್ಕಾರದ  ಬಾಹ್ಯಕಾಶ ಇಲಾಖೆಯಡಿಯಲ್ಲಿ ಸ್ವಾಯಕ್ತ ಸಂಸ್ಥೆಯಾಗಿದೆ.

ದೇಶದ ಅಗತ್ಯಗಳನ್ನು ಪೂರೈಸಲು ಮೈಕ್ರೋಎಲೆಕ್ರಾನಿಕ್ಸ್ ಕ್ಷೇತ್ರದಲ್ಲಿ ಸಂಶೋದನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಎಸ್.ಸಿ.ಎಲ್ ಎಲ್ಲಾ ಮೂಲ ಭೂತ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಸಂಯೋಜಿಸಿ, ಜೊತೆಗೆ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಅಸೆಂಬ್ಲಿ ಮತ್ತು ಪ್ಯಾಕೆಜಿಂಗ್ ಇವುಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News