ಬಾಲ್‍ಬ್ಯಾಡ್ಮಿಂಟನ್‍: ಆಳ್ವಾಸ್ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ

Update: 2019-01-15 17:44 GMT

ಮೂಡುಬಿದಿರೆ, ಜ. 15: ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜರುಗಿದ 64ನೇ ರಾಷ್ಟ್ರೀಯ ಪದವಿಪೂರ್ವ ಕಾಲೇಜುಗಳ ಬಾಲ್‍ಬ್ಯಾಡ್ಮಿಂಟನ್‍ ಕೂಟ ಹಾಗೂ ಮಚಲಿಪಟ್ನಂನ ಕೃಷ್ಣ ವಿ.ವು ಆಶ್ರಯದಲ್ಲಿ ವಿಜಯವಾಡದಲ್ಲಿ ಜರುಗಿದ ಅಖಿಲ ಭಾರತಅಂತರ್ ವಿ.ವಿ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದು, ಕರ್ನಾಟಕ ರಾಜ್ಯ ಹಾಗೂ ಮಂಗಳೂರು ವಿ.ವಿ ತಂಡಗಳು ಚಾಂಪಿಯನ್‍ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿವೆ.

64ನೇ ರಾಷ್ಟ್ರೀಯ ಪದವಿಪೂರ್ವ ಕಾಲೇಜುಗಳ ಬಾಲ್‍ಬ್ಯಾಡ್ಮಿಂಟನ್‍ ಕೂಟದಲ್ಲಿ ರಾಜ್ಯ ತಂಡ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗಳಿಸಿದೆ. ರಾಜ್ಯ ತಂಡದಲ್ಲಿ ಆಡಿದ ಪ್ರಮುಖ ಐದು ಮಂದಿ ಆಟಗಾರರು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಎನ್ನುವುದು ಗಮನಾರ್ಹ. ಈ ಕೂಟದಲ್ಲಿ ಕಂಚಿನ ಪದಕ ಪಡೆದ ರಾಜ್ಯ ಬಾಲಕರ ತಂಡದಲ್ಲಿ ಆಡಿದ್ದ ಪ್ರಮುಖ ಐದು ಮಂದಿ ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳು.

ಅಂತರ್ ವಿ.ವಿಯಲ್ಲಿದಾಖಲೆಯ ಸಾಧನೆ

ಆಂಧ್ರಪ್ರದೇಶದ ಮಚಲಿಪಟ್ನಂನ ಕೃಷ್ಣ ವಿ.ವಿಆಶ್ರಯದಲ್ಲಿಜರುಗಿದ ಅಖಿಲ ಭಾರತಅಂತರ್ ವಿ.ವಿ ಮಹಿಳಾ ಬಾಲ್‍ಬ್ಮಾಡಿಂಟನ್‍ಕೂಟದಲ್ಲಿ ಮಂಗಳೂರು ವಿ.ವಿಯು ಸತತ 15ನೇ ಬಾರಿಗೆ ಲೀಗ್‍ಅರ್ಹತೆ ಪಡೆದಿರುವುದಲ್ಲದೆ ಎಂಟನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಜೇತ ಮಂಗಳೂರು ವಿ.ವಿ ತಂಡದ ಎಲ್ಲ ಹತ್ತು ಮಂದಿ ಆಟಗಾರ್ತಿಯರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು. ಮಂಗಳೂರು ವಿ.ವಿಯೂ ಅಖಿಲ ಭಾರತಅಂತರ್ ವಿ.ವಿಕೂಟದಲ್ಲಿ ನಿರಂತರ ಐದನೇ ಬಾರಿಗೆ ಚಾಂಪಿಯನ್‍ಶಿಪ್ ಪಡೆಯುತ್ತಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿರುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News