ಜ.17: ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಪಬ್ಲಿಸಿಟಿ ಕನ್ವೆನ್ಶನ್

Update: 2019-01-16 05:54 GMT

ಮುಡಿಪು, ಜ.16: ಬೆಂಗಳೂರಿನ ಖುದ್ದೂಸ್ ಈದ್ಗಾ ಮೈದಾನದಲ್ಲಿ ಜ.27ರಂದು ನಡೆಯುವ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ ಹಾಗೂ ಜ.26 ಮತ್ತು 27ರಂದು ನಡೆಯುವ ಉಂದುಲುಸ್ ರಾಜ್ಯ ಪ್ರತಿನಿಧಿ ಸಮಾವೇಶದ ಪ್ರಚಾರಾರ್ಥ ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವತಿಯಿಂದ ಪಬ್ಲಿಸಿಟಿ ಕನ್ವೆನ್ಸನ್ ಜ.17ರಂದು ಸಂಜೆ 7 ಗಂಟೆಗೆ ಮುಡಿಪುವಿನ ಎಜ್ಯುಪಾರ್ಕ್ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ತೌಸೀಫ್ ಸಅದಿ ಅಧ್ಯಕ್ಷತೆ ವಹಿಸಲಿರುವರು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮ ಉದ್ಘಾಟಿಸಲಿರುವರು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಭಾಷಣ ಮಾಡಲಿರುವರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಜಮಾಲುದ್ದೀನ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದಾರೆ ಎಂದು ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News