ಕೊಣಾಜೆ: ಉಳ್ಳಾಲ್ತಿ ಕ್ಷೇತ್ರ ಸಂಪರ್ಕದ ನೂತನ ಕಾಂಕ್ರೀಟು ರಸ್ತೆ ಉದ್ಘಾಟನೆ

Update: 2019-01-16 12:48 GMT

ಕೊಣಾಜೆ, ಜ. 16: ಕೊಣಾಜೆಯ ಶ್ರೀ ಉಳ್ಳಾಲ್ತಿ ಕ್ಷೇತ್ರವನ್ನು ಸಂಪರ್ಕಕ್ಕೆ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟು ರಸ್ತೆಯನ್ನು ಸಚಿವ ಯು.ಟಿ.ಖಾದರ್ ಅವರು ಬುಧವಾರ ಉದ್ಘಾಟಿಸಿದರು.

ನೂತನ ರಸ್ತೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕೊಣಾಜೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯುತ್ತಿದ್ದು, ಇದೀಗ ಇಲ್ಲಿ ನಿರ್ಮಾಣಗೊಂಡಿರುವ ನೂತನ ಕಾಂಕ್ರೀಟು ರಸ್ತೆಯ ಉದ್ಘಾಟನೆಯ ಭಾಗ್ಯ ನನಗೆ ದೊರಕಿರುವುದು ಪುಣ್ಯದ ಕಾರ್ಯವಾಗಿದೆ. ಈಗಾಗಲೇ ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರಿಗೆ ಸುಸಜ್ಜಿತ ರಸ್ತೆ ಹಾಗೂ ಮೂಲಭೂತ ಸೌಲಭ್ಯಗಳ ವಿಸ್ತರಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಎಲ್ಲರ ಸಹಕಾರದೊಂದಿಗೆ ದೇವಸ್ಥಾನ, ಮಸೀದಿ, ಚರ್ಚ್‍ನಂತಹ ಪುಣ್ಯ ಕ್ಷೇತ್ರವನ್ನು ಸಂಪರ್ಕಿ ಸುವ ರಸ್ತೆಗಳ ಅಭಿವೃದ್ಧಿಯನ್ನು ಮಾಡಲಾಗಿದೆ. ಇದೀಗ ಈ ಭಾಗದ ಜನರ ಬೇಡಿಕೆಯಂತೆ ಉಳ್ಳಾಲ್ತಿ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಯ ಉದ್ಘಾಟನೆಯು ನೆರವೇದ್ದು ಇಲ್ಲಿಗೆ ಬರುವ ಭಕ್ತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಉಳ್ಲಾಲ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಕ್ಷೇತ್ರದ ಅರ್ಚಕರಾದ ಸುದರ್ಶನ ಭಟ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲೀಂ ಮೇಘ, ಇಕ್ಬಾಲ್ ಸಾಮಣಿಗೆ, ರಮೇಶ್ ಬೋಳಿಯಾರ್, ರಾಜಾರಾಂ ರೈ, ಪದ್ಮನಾಭ ಗಟ್ಟಿ, ದೇವಣ್ಣ ಶೆಟ್ಟಿ, ಖಲೀಲ್ ಅಸೈಗೋಳಿ, ರವೀಂದ್ರ ರೈ ಹರೇಕಳ, ರವೀಂದ್ರ ಬಂಗೇರ, ಹರೀಶ್ ಪೂಜಾರಿ ಕೊಣಾಜೆ, ಅಚ್ಯುತಗಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News