ಜ.19: ಎ.ಜೆ. ಆಸ್ಪತ್ರೆಯಲ್ಲಿ ಕರಾವಳಿಯ ಪ್ರಥಮ ಸ್ಥೂಲಕಾಯ ಕ್ಲಿನಿಕ್

Update: 2019-01-16 13:55 GMT

ಮಂಗಳೂರು, ಜ.16: ನಾಡಿನ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೇವೆಯನ್ನು ನೀಡುತ್ತಿರುವ ಮಂಗಳೂರಿನ ಕುಂಟಿಕಾನದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರಾವಳಿಯ ಪ್ರಪ್ರಥಮ ಸ್ಥೂಲಕಾಯ (ಒಬೆಸಿಟಿ) ಕ್ಲಿನಿಕ್ ಆರಂಭಗೊಳ್ಳುತ್ತಿದೆ.

ಎ.ಜೆ. ಆಸ್ಪತ್ರೆಯು ತನ್ನ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಮೂಲಕ ಜ.19ರಂದು ವಿಶೇಷ ಸ್ಥೂಲಕಾಯ ಕ್ಲಿನಿಕ್‌ನ್ನು ಆರಂಭಿಸುತ್ತಿದೆ. ಈ ಕ್ಲಿನಿಕ್ ಸ್ಥೂಲಕಾಯದವರ ಅವಶ್ಯಕತೆಗನುಗುಣವಾಗಿ ಅವರ ಪರಿವರ್ತನೆಗೆ ದಾರಿಯಾಗಿ ಅವರು ಇತರರಂತೆ ಜೀವನ ನಡೆಸಲು ಸಹಾಯಕವಾಗಲಿದೆ.

ಸ್ಥೂಲಕಾಯ ಇಂದಿನ ಕಾಲದ ಆರೋಗ್ಯ ಅಸ್ವಸ್ಥತೆಯಾಗಿದೆ. ಸ್ಥೂಲಕಾಯತೆ ಪ್ರಪಂಚದೆಲ್ಲೆಡೆ ಹರಡಿದ್ದು, ಸಮಾಜದ ಮೇಲೆ ಭಾರೀ ಸಾಮಾಜಿಕ-ಆರ್ಥಿಕ ಹೊರೆಗೆ ಕಾರಣವಾಗಿದೆ. ಸ್ಥೂಲಕಾಯ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ಸಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಬೇರಿಯಾಟ್ರಿಕ್ ತಜ್ಞರಾದ ಡಾ.ರೋಹನ್ ಶೆಟ್ಟಿ ಮತ್ತು ಡಾ.ಅಶ್ವಿನ್ ಆಳ್ವ, ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ಬಿ.ಶಿವಪ್ರಸಾದ್, ಡಾ.ರಾಘವೇಂದ್ರ ಪ್ರಸಾದ್, ಎಂಡೋಕ್ರೈನಾಲಜಿಸ್ಟ್ ಡಾ.ಗಣೇಶ್ ಎಚ್.ಕೆ., ಪಥ್ಯೆ ತಜ್ಞರು, ಮನೋಶಾಸ್ತ್ರಜ್ಞರು, ಫಿಸಿಯೋಥೆರಪಿಸ್ಟ್‌ರನ್ನೊಳಗೊಂಡ ಶಿಸ್ತಿನ ತಂಡ ಎ.ಜೆ. ಒಬೆಸಿಟಿ ಕ್ಲಿನಿಕ್‌ನಲ್ಲಿದೆ.

ಈ ತಂಡವು ವಿವರವಾದ ಮೌಲ್ಯಮಾಪನ ನಡೆಸಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೇವೆಯನ್ನು ನೀಡಿ ಸ್ಥೂಲಕಾಯಿಗಳಿಗೆ ಹೊಸ ಜೀವನವನ್ನು ಕಲ್ಪಿಸಿ ಪರಿವರ್ತನೆಗೆ ದಾರಿಯಾಗಲಿದೆ. 

ಎ.ಜೆ. ಆಸ್ಪತ್ರೆಯು ಸದಾ ಜನರ ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸಿ ಮುಂಚೂಣಿಯಲ್ಲಿದೆ. ಒಬೆಸಿಟಿ ಕ್ಲಿನಿಕ್ ಆರಂಭದೊಂದಿಗೆ ಆಸ್ಪತ್ರೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಕಸಿ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News