ಮಹಿಳಾ ಕ್ಯಾನ್ಸರ್ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ: ಪುರುಷ ನರ್ಸ್ ಬಂಧನ

Update: 2019-01-16 14:33 GMT

ಗುವಾಹಟಿ, ಜ.16: ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಮುಖ ಕ್ಯಾನ್ಸರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ 26 ವರ್ಷದ ಪುರುಷ ನರ್ಸ್ ಒಬ್ಬ ಮೂವರು ಕ್ಯಾನ್ಸರ್ ಪೀಡಿತ ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತ್ರಿಪುರದ ಬೆಲೋನಿಯಾ ಗ್ರಾಮದ ನಿವಾಸಿ ಕಮಲಕಾಂತಿ ಸೇನ್ ಚೌಧರಿ ಆರೋಪಿಯಾಗಿದ್ದು ಈತ ಗುವಾಹಟಿಯ ಬಿ.ಬರುವ ಕ್ಯಾನ್ಸರ್ ಸಂಸ್ಥೆ(ಬಿಬಿಸಿಐ)ಯಲ್ಲಿ ಡಿಸೆಂಬರ್ 31ರ ರಾತ್ರಿ ಈ ಕೃತ್ಯ ನಡೆಸಿದ್ದಾನೆ ಎಂದು ಸಂತ್ರಸ್ತ ಮಹಿಳೆಯರ ಪೋಷಕರು ದೂರು ನೀಡಿದ್ದರು. ಈ ಮಧ್ಯೆ ಚೌಧರಿ ಜನವರಿ 8ರಂದು ಕೆಲಸಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದ. ಈತನನ್ನು ತ್ರಿಪುರದಲ್ಲಿ ಬಂಧಿಸಿ ಗುವಾಹಟಿಗೆ ತರಲಾಗಿದ್ದು, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಕಳ್ಳತನಕ್ಕೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News