ಜಲ್ಲಿಕಟ್ಟು ಉತ್ಸವ: 49 ಜನರಿಗೆ ಗಾಯ
Update: 2019-01-16 20:06 IST
ಮಧುರೈ, ಜ. 16: ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಉತ್ಸವದ ಮೊದಲನೇ ದಿನವೇ 49 ಜನರು ಗಾಯಗೊಂಡಿರುವುದು ಪ್ರಾಣಿಗಳ ಹಕ್ಕು ರಕ್ಷಣಾ ಹೋರಾಟ ಗಾರರ ಕಣ್ಣು ಕೆಂಪಾಗಿಸಿದೆ.
ಮಧುರೈಯಲ್ಲಿ ನಡೆದ ಉತ್ಸವದ ಆರಂಭದ ದಿನ ಸುಮಾರು 500 ಗೂಳಿಗಳು ಹಾಗೂ ಅಷ್ಟೇ ಸಂಖ್ಯೆಯ ಪಳಗಿಸುವವರು ಪಾಲ್ಗೊಂಡಿದ್ದರು ಎಂದು ಜಿಲ್ಲಾಧಿಕಾರಿ ಎಸ್. ನಟರಾಜನ್ ತಿಳಿಸಿದ್ದಾರೆ. ನಿನ್ನೆ 49 ಜನರು ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳ ಕಾರಣಕ್ಕೆ 9 ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬುಧವಾರ ಉತ್ಸವದಲ್ಲಿ ಗೂಳಿಗಳ ಸಂಖ್ಯೆ ದ್ವಿಗುಣಗೊಂಡಿದೆ.