ಕುಂಭ ಮೇಳದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪುಣ್ಯಸ್ನಾನ

Update: 2019-01-16 14:42 GMT

ಪ್ರಯಾಗ್‌ರಾಜ್ (ಅಲಹಾಬಾದ್), ಜ. 16: ಸಮಾಜದಿಂದ ತೃತೀಯ ಲಿಂಗಿ ಸಮುದಾಯವನ್ನು ದೂರವಿರಿಸಿದ ಸಂಪ್ರದಾಯವಾದಿ ಕಾನೂನು ಹಾಗೂ ನಂಬಿಕೆಗಳನ್ನು ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಿರುವ ಲಕ್ಷ್ಮೀ ನಾರಾಯಣ ತ್ರಿಪಾಠಿ ಇತರ ತೃತೀಯ ಲಿಂಗಿಗಳೊಂದಿಗೆ ಬುಧವಾರ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಜಗತ್ತಿನ ಧಾರ್ಮಿಕವಾಗಿ ಸೇರುವ ಅತಿ ದೊಡ್ಡ ಉತ್ಸವವಾದ ಕುಂಭ ಮೇಳದಲ್ಲಿ 2 ಲಕ್ಷ ತೃತೀಯ ಲಿಂಗಿಗಳು ಮೊದಲ ಬಾರಿಗೆ ಪವಿತ್ರ ಗಂಗಾ, ಯಮುನಾ, ಸರಸ್ವತಿ ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಕೇಸರಿ ಹಾಗೂ ಕೆಂಪು ಸೀರೆಯಲ್ಲಿ ನದಿ ದಂಡೆಗೆ ಆಗಮಿಸಿದ ತೃತೀಯ ಲಿಂಗಿಗಳು ಹಿಂದೂಗಳು ‘ಪಾಪ ನಾಶನ’ ಎಂದು ಕರೆಯಲಾದ ನದಿಯಲ್ಲಿ ಸ್ನಾನ ಮಾಡಿದರು. ಈ ಭಾಗವಹಿಸುವಿಕೆ ಪ್ರಧಾನ ವಾಹಿನಿ ಸಮಾಜ ನಮ್ಮನ್ನು ಸ್ವೀಕರಿಸಿದೆ ಎಂಬುದರ ಸಂಕೇತ. ದೇವರು ನಮ್ಮೊಂದಿಗೆ ಇದ್ದಾರೆ ಎಂದು ತೃಪ್ತಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News