ಅಮೆಝಾನ್ ಇಂಡಿಯಾದಲ್ಲಿ ತೆಂಗಿನಕಾಯಿ ಚಿಪ್ಪಿಗೆ 1300 ರೂ.!

Update: 2019-01-16 15:55 GMT

ಹೊಸದಿಲ್ಲಿ,ಜ.16: ಭಾರತದಲ್ಲಿ ಆನ್‌ ಲೈನ್ ಶಾಪಿಂಗ್ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು, ನಿಧಾನವಾಗಿ ದೇಶದ ಪ್ರಮುಖ ಆರ್ಥಿಕ ಮೂಲವಾಗಿ ಬದಲಾಗುತ್ತಿದೆ. ಇದೇ ವೇಳೆ ಆನ್‌ಲೈನ್ ಮಳಿಗೆಗಳಲ್ಲಿ ಮಾರಲ್ಪಡುವ ಕೆಲವೊಂದು ವಸ್ತುಗಳ ಬೆಲೆಗಳು ನಿಜವಾಗಿಯೂ ಈ ವಸ್ತುಗಳು ಇಷ್ಟೊಂದು ಬೆಲೆಬಾಳುತ್ತವೆಯೇ ಎಂಬ ಅನುಮಾನವನ್ನೂ ಮೂಡಿಸುತ್ತವೆ. ಸದ್ಯ ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಅಮೆಝಾನ್ ಇಂಡಿಯಾದಲ್ಲಿ ತೆಂಗಿನ ಚಿಪ್ಪನ್ನು 1,365ರೂ.ಗೆ ಮಾರಾಟ ಮಾಡಲಾಗುತ್ತಿದ್ದು ಎಲ್ಲರ ಹುಬ್ಬೇರಿಸಿದೆ.

ಅದರಲ್ಲೂ ಕರ್ನಾಟಕ ಮತ್ತು ಕೇರಳದಂತ ತೆಂಗಿನಕಾಯಿ ಹೇರಳವಾಗಿ ಸಿಗುವ ಪ್ರದೇಶಗಳ ಜನರಂತೂ ಈ ಜಾಹೀರಾತನ್ನು ಕಂಡು ಬೆಕ್ಕಸಬೆರಗಾಗಿದ್ದಾರೆ. ತೆಂಗಿನಕಾಯಿ ಚಿಪ್ಪಿನ ಜಾಹೀರಾತಿನಲ್ಲಿ, ಈ ಚಿಪ್ಪು ನೈಸರ್ಗಿಕವಾಗಿದ್ದು ಒಡಕುಗಳು ಇರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಸೆಂಚೂರಿ ನೋವೆಲ್ಟಿ ಎಂಬ ಸಂಸ್ಥೆ ಈ ಚಿಪ್ಪುಗಳ ಮಾರಾಟ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News