2017-18ರಲ್ಲಿ ಬಿಜೆಪಿಗೆ 430 ಕೋಟಿ ರೂ. ದೇಣಿಗೆ!

Update: 2019-01-16 17:32 GMT

ಹೊಸದಿಲ್ಲಿ,ಜ.16: 2017-18ರಲ್ಲಿ ಬಿಜೆಪಿ 20,000 ರೂ.ಗಿಂತ ಹೆಚ್ಚಿನ ಪ್ರಮಾಣದ ಶೇ.93 ದೇಣಿಗೆಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ನಿಗಾಸಂಸ್ಥೆ ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.

ಎಲ್ಲ ರಾಷ್ಟ್ರೀಯ ಪಕ್ಷಗಳು ಗಳಿಸಿರುವ ಒಟ್ಟಾರೆ 469.89 ಕೋಟಿ ರೂ.ನಲ್ಲಿ ಬಿಜೆಪಿ ಏಕಾಂಗಿಯಾಗಿ 437.04 ಕೋಟಿ ರೂ. ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ. ಏಳು ರಾಷ್ಟ್ರೀಯ ಪಕ್ಷಗಳು ಒಟ್ಟಾರೆಯಾಗಿ 20,000 ರೂ.ಗಿಂತ ಹೆಚ್ಚಿನ 4,201 ದೇಣಿಗೆಗಳನ್ನು ಪಡೆದುಕೊಂಡಿದ್ದು, ಇವುಗಳ ಒಟ್ಟು ಮೊತ್ತ 469.89 ಕೋಟಿ ರೂ.ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ದೇಣಿಗೆಗಳ ಪೈಕಿ ಬಿಜೆಪಿ 2,977 ದೇಣಿಗೆಗಳನ್ನು ಪಡೆದುಕೊಂಡಿದ್ದರೆ ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು 26.658 ಕೋಟಿ ರೂ. ಪಡೆದಿರುವುದಾಗಿ ಘೋಷಿಸಿದೆ. ಬಿಜೆಪಿ ಪಡೆದುಕೊಂಡಿರುವ ದೇಣಿಗೆಯು ಉಳಿದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಎನ್‌ಸಿಪಿ, ಸಿಪಿಐ, ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್ ಒಟ್ಟಾಗಿ ಪಡೆದುಕೊಂಡಿರುವ ದೇಣಿಗೆಗಿಂತ ಹನ್ನೆರಡು ಪಟ್ಟು ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News