ಅಮೆರಿಕದ ವಿಮಾನ ನಿಲ್ದಾಣಕ್ಕೆ ಮುಹಮ್ಮದ್ ಅಲಿ ಹೆಸರು

Update: 2019-01-17 16:17 GMT

ವಾಶಿಂಗ್ಟನ್, ಜ. 17: ಅಮೆರಿಕದ ಕೆಂಟಕಿ ರಾಜ್ಯದ ಲೂಯಿಸ್‌ವಿಲ್ ನಗರದ ವಿಮಾನ ನಿಲ್ದಾಣಕ್ಕೆ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಹೆಸರನ್ನು ಇಡಲು ಎಲ್ಲ ಸಿದ್ಧತೆಗಳು ನಡೆದಿವೆ.

ಇದೇ ನಗರದ ನಿವಾಸಿಯಾಗಿದ್ದ ಮುಹಮ್ಮದ್ ಅಲಿ 2016ರಲ್ಲಿ ನಿಧನರಾಗಿದ್ದಾರೆ.

ಮುಹಮ್ಮದ್ ಅಲಿ ಜಗತ್ತಿನಾದ್ಯಂತದ ನೂರಾರು ಕೋಟಿ ಜನರನ್ನು ಪ್ರಭಾವಿತಗೊಳಿಸಿದ್ದರು ಎಂದು ಲೂಯಿಸ್‌ವಿಲ್ ಮೇಯರ್ ಗ್ರೆಗ್ ಫಿಶರ್ ಬುಧವಾರ ಹೇಳಿದ್ದಾರೆ ಎಂದು ‘ಕೊರಿಯರ್-ಜರ್ನಲ್’ ವರದಿ ಮಾಡಿದೆ.

ಅಲಿಯ 77ನೇ ಹುಟ್ಟಿದ ದಿನದ ಮುನ್ನಾ ದಿನದಂದು ಈ ಪ್ರಕಟನೆ ಹೊರಬಿದ್ದಿದೆ.

ಲೂಯಿಸ್‌ವಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೂಯಿಸ್‌ವಿಲ್ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮರುನಾಮಕರಣಗೊಳಿಸುವ ಪ್ರಕ್ರಿಯೆ ಜೂನ್ ವೇಳೆಗೆ ಮುಕ್ತಾಯಗೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೂನ್ ತಿಂಗಳಲ್ಲಿ ನಗರದಲ್ಲಿ ಬಾಕ್ಸರ್ ದಂತಕತೆಯ ಗೌರವಾರ್ಥ ‘ಐ ಆ್ಯಮ್ ಅಲಿ’ ಉತ್ಸವ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News