ಬಿಎಸ್‌ಪಿ ಆಂದೋಲನದಲ್ಲಿ ಸೋದರಳಿಯನ ಸೇರ್ಪಡೆ: ಪಕ್ಷದ ಮುಖ್ಯಸ್ಥೆ ಮಾಯಾವತಿ,

Update: 2019-01-17 16:50 GMT

ಹೊಸದಿಲ್ಲಿ,ಜ.17: ತನ್ನ ವಿರುದ್ಧದ ಸ್ವಜನ ಪಕ್ಷಪಾತದ ಆರೋಪಗಳಿಗೆ ಸವಾಲು ಹಾಕಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು,ತನ್ನ ಸೋದರಳಿಯ ಆಕಾಶ್ ಬಿಎಸ್‌ಪಿ ಆಂದೋಲನದಲ್ಲಿ ಸೇರುವಂತೆ ಮಾಡುವುದಾಗಿ ಮತ್ತು ರಾಜಕೀಯದ ಪಟ್ಟುಗಳನ್ನು ಕಲಿಯಲು ಅವರಿಗೆ ಅವಕಾಶ ನೀಡುವುದಾಗಿ ಗುರುವಾರ ಇಲ್ಲಿ ಪ್ರಕಟಿಸಿದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಬಿಎಸ್‌ಪಿಯ ಜನಪ್ರಿಯತೆ ಹೆಚ್ಚುತ್ತಿರುವುದು ಕೆಲವು ಪಕ್ಷಗಳು ಮತ್ತು ನಾಯಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ನಮ್ಮೊಂದಿಗೆ ನ್ಯಾಯಯುತವಾಗಿ ಹೋರಾಡುವ ಬದಲು ಅವರು ನಮ್ಮ ವಿರುದ್ಧ ನಿಂದನೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಕೆಲವು ಜಾತಿವಾದಿ ಮತ್ತು ದಲಿತ ವಿರೋಧಿ ಟಿವಿ ವಾಹಿನಿಗಳ ನೆರವಿನೊಂದಿಗೆ ನಮ್ಮ ಪಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ನಾನು ಆಕಾಶ್‌ನನ್ನು ಬಿಎಸ್‌ಪಿ ಆಂದೋಲನದಲ್ಲಿ ಸೇರಿಸಿಕೊಂಡು ರಾಜಕೀಯವನ್ನು ಕಲಿಯಲು ಅವಕಾಶ ನೀಡುತ್ತೇನೆ ಎಂದರು. ಮಾಯಾವತಿ ತನ್ನ ಸೋದರಳಿಯನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಲಿದ್ದಾರೆ ಎಂಬ ಮಾಧ್ಯಮಗಳಲ್ಲಿಯ ವರದಿಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ತನ್ನ ಕಿರಿಯ ಸೋದರ ಆನಂದ ಕುಮಾರ್ ಮತ್ತು ಅವರ ಕುಟುಂಬ 2003ರಿಂದಲೂ ತನ್ನನ್ನು ಮತ್ತು ಬಿಎಸ್‌ಪಿಯನ್ನು ಬೆಂಬಲಿಸಲು ನಿಸ್ವಾರ್ಥ ಹೋರಾಟ ನಡೆಸಿದ್ದಾರೆ. ಆದರೆ ಅವರೆಂದೂ ಪಕ್ಷದಲ್ಲಿ ಹುದ್ದೆಯನ್ನು ಕೇಳಿರಲಿಲ್ಲ ಎಂದೂ ಮಾಯಾವತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News