ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ

Update: 2019-01-18 09:26 GMT

ಪೋರ್ಟ್‌ಬ್ಲೇರ್,ಜ.17: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಆದರೆ ತೀವ್ರತೆ ರಿಕ್ಟರ್ ಮಾಪಕದಲ್ಲಿ 6ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್)ವು ತಿಳಿಸಿದೆ. ಭೂಕಂಪದಿಂದ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.

ಬೆಳಿಗ್ಗೆ 8:43ಕ್ಕೆ ಭೂಕಂಪ ಸಂಭವಿಸಿದ್ದು,ಅದರ ಕೇಂದ್ರಬಿಂದು ನಿಕೋಬಾರ್ ದ್ವೀಪಗಳ ಪ್ರದೇಶದಲ್ಲಿತ್ತು. ಸಮುದ್ರ ಮಟ್ಟದಲ್ಲಿ ಯಾವುದೇ ಏರಿಕೆಯಾಗಿಲ್ಲವಾದ್ದರಿಂದ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿರಲಿಲ್ಲ ಎಂದು ಮಹಾಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಎಸ್‌ಪಿಎಸ್ ಶೆಣೊಯ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News