ಪ್ರಧಾನಿ ಮೋದಿ ಹೇಳಿಕೆ ನ್ಯಾಯಾಂಗ ನಿಂದನೆ: ಸೀತಾರಾಮ ಯೆಚೂರಿ

Update: 2019-01-17 18:17 GMT

ಭೋಪಾಲ, ಜ. 17: ಶಬರಿಮಲೆ ವಿವಾದದ ಕುರಿತು ಕೇರಳದಲ್ಲಿರುವ ಸಿಪಿಐ (ಎಂ) ನೇತೃತ್ವದ ಸರಕಾರವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಮೋದಿ ಅವರ ಹೇಳಿಕೆ ನ್ಯಾಯಾಂಗ ನಿಂದನೆ ಎಂದಿದ್ದಾರೆ. ಕೊಲ್ಲಂನಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಈ ನಡೆ ಯಾವುದೇ ಪಕ್ಷ ಹಾಗೂ ಸರಕಾರಕ್ಕೆ ಅವಮಾನಕರವಾಗಿರುವು ದರಿಂದ ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ನಡತೆ ಚಾರಿತ್ರಿಕವಾಗಿ ಕೆಳಗೆ ಇಳಿದಿದೆ ಎಂದಿದ್ದಾರೆ. ಶಬರಿಮಲೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟರು ಲಿಂಗ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಕ್ರಿಯಾಚರಣೆ ಇದಕ್ಕೆ ತದ್ವಿರುದ್ದವಾಗಿದೆ ಎಂದು ಅವರು ಹೇಳಿದರು. ಮೋದಿ ಅವರ ಹೇಳಿಕೆಯನ್ನು ಯೆಚೂರಿ ಖಂಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸುವುದನ್ನು ಹೊರತುಪಡಿಸಿದರೆ, ಸರಕಾರಕ್ಕೆ ಯಾವುದೇ ಇತರ ಆಯ್ಕೆಗಳಿಲ್ಲ. ಈಗ ದೇಶದ ಪ್ರಧಾನ ಮಂತ್ರಿ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಯಾಕೆ ಅನುಷ್ಠಾನಗೊಳಿಸಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಸೀತಾರಾಮ ಯೆಚೂರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News