ರಶ್ಯ ನಂಟಿನ ಪುಟ, ಖಾತೆಗಳನ್ನು ರದ್ದುಪಡಿಸಿದ ಫೇಸ್‌ಬುಕ್
Update: 2019-01-17 22:50 IST
ಕ್ಯಾಲಿಫೋರ್ನಿಯ, ಜ. 17: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಸಂಘಟಿತ ಅನುಚಿತ ವ್ಯವಹಾರದಲ್ಲಿ ತೊಡಗಿದ್ದ ಹಲವಾರು ಪುಟಗಳು, ಖಾತೆಗಳು ಮತ್ತು ಗ್ರೂಪ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್ ಇಂಕ್ ಗುರುವಾರ ತಿಳಿಸಿದೆ.
ಎರಡು ಚಟುವಟಿಕೆಗಳು ರಶ್ಯದಲ್ಲಿ ಹುಟ್ಟಿಕೊಂಡಿವೆ ಎನ್ನುವುದು ಪತ್ತೆಯಾಗಿದೆ ಹಾಗೂ ಅವುಗಳ ಪೈಕಿ ಒಂದು ಹಲವು ದೇಶಗಳಲ್ಲಿ ಸಕ್ರಿಯವಾಗಿದೆ ಹಾಗೂ ಇನ್ನೊಂದು ಯುಕ್ರೇನ್‌ಗೆ ಸೀಮಿತವಾಗಿದೆ ಎಂದು ಸಾಮಾಜಿಕ ಮಾಧ್ಯಮ ಕಂಪೆನಿ ಬ್ಲಾಗ್ ಸ್ಪಾಟ್‌ನಲ್ಲಿ ಹೇಳಿದೆ.
‘‘ಈ ಎರಡು ಚಟುವಟಿಕೆಗಳ ನಡುವೆ ಯಾವುದೇ ನಂಟನ್ನು ನಾವು ಕಂಡಿಲ್ಲ. ಆದರೆ, ತಾವು ಯಾರು, ತಾವು ಏನು ಮಾಡುತ್ತಿದ್ದೇವೆ ಎಂಬ ಬಗ್ಗೆ ಇತರರಿಗೆ ತಪ್ಪು ಮಹಿತಿ ನೀಡಲು ಅವುಗಳು ಸರಣಿ ಖಾತೆಗಳನ್ನು ಸೃಷ್ಟಿಸುತ್ತಿವೆ’’ ಎಂದು ಅದು ತಿಳಿಸಿದೆ.