ಜೆಟ್‌ಏರ್‌ವೇಸ್‌ಗೆ 700 ಕೋಟಿ ಒದಗಿಸಲು ಸಿದ್ಧ: ಗೋಯಲ್

Update: 2019-01-17 17:38 GMT

 ಹೊಸದಿಲ್ಲಿ, ಜ.17: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್ ಸಂಸ್ಥೆಗೆ ಹೆಚ್ಚುವರಿಯಾಗಿ 700 ಕೋಟಿ ರೂ. ಒದಗಿಸಲು ತಾನು ಸಿದ್ಧನಿದ್ದೇನೆ. ಆದರೆ ಕೆಲವು ಷರತ್ತುಗಳಿವೆ ಎಂದು ಜೆಟ್ ಏರ್‌ವೇಸ್‌ನ ಅಧ್ಯಕ್ಷ ನರೇಶ್ ಗೋಯಲ್ ತಿಳಿಸಿದ್ದಾರೆ.

ಜೆಟ್ ಏರ್‌ವೇಸ್‌ನಲ್ಲಿ ತನ್ನ ಪಾಲು (ಶೇರುಗಳು) ಶೇ.25ಕ್ಕಿಂತ ಕಡಿಮೆ ಇರಬಾರದು ಎಂಬ ಷರತ್ತಿಗೆ ಒಪ್ಪುವುದಾದರೆ ತಾನು 700 ಕೋಟಿ ರೂ.ಒದಗಿಸುತ್ತೇನೆ ಮತ್ತು ತಾನು ಹೊಂದಿರುವ ಶೇರುಗಳನ್ನು ಒತ್ತೆಯಿಡಲು ಸಿದ್ಧ ಎಂದು ಸ್ಟೇಟ್ ಬ್ಯಾಂಕ್‌ಗೆ ಬರೆದಿರುವ ಪತ್ರದಲ್ಲಿ ಗೋಯಲ್ ತಿಳಿಸಿದ್ದಾರೆ. ಸಂಸ್ಥೆಯ ಮೇಲೆ ಹೊಂದಿರುವ ನಿಯಂತ್ರಣವನ್ನು ಗೋಯಲ್ ತ್ಯಜಿಸಲು ಒಪ್ಪುವುದಾದರೆ ತಾನು ಜೆಟ್ ಏರ್‌ವೇಸ್‌ಗೆ ಹಣ ಒದಗಿಸುತ್ತೇನೆ ಎಂದು ತಂತ್ರಕುಶಲತೆಯ ಪಾಲುದಾರ ಎತ್ತಿಹಾದ್ ಮುಂದಿಟ್ಟಿರುವ ಪ್ರಸ್ತಾವನೆಗೆ ಪ್ರತಿಯಾಗಿ ಗೋಯಲ್ ಈ ಕೊಡುಗೆ ಮುಂದಿಟ್ಟಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್(ಬಿಎಸ್‌ಇ)ನ ವಿನ್ಯಾಸದ ಪ್ರಕಾರ , 2018ರ ಡಿಸೆಂಬರ್ ಅಂತ್ಯದಲ್ಲಿ ಗೋಯಲ್ ಜೆಟ್‌ಏರ್‌ವೇಸ್‌ನ 5,79,33,665 ಶೇರುಗಳನ್ನು(ಶೇ.51) ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News