ಜ. 20ರಂದು ಎಸ್ಸೆಸ್ಸೆಫ್ ನಿಂದ ಎಸೆಸೆಲ್ಸಿ ಕಾನ್ಫಿಡೆನ್ಸ್ ಟೆಸ್ಟ್

Update: 2019-01-18 11:20 GMT

ಬಂಟ್ವಾಳ, ಜ. 18: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಎಸೆಸೆಲ್ಸಿ ಕಾನ್ಫಿಡೆನ್ಸ್ ಟೆಸ್ಟ್-2019 ಜ. 20ರಂದು  ರಾಜ್ಯದ ಎಲ್ಲಾ ಡಿವಿಷನ್ ಕೇಂದ್ರಗಳಲ್ಲಿ ನಡೆಯಲಿದೆ.

ಕಳೆದ ವರ್ಷದ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ  ಅವಲೋಕನ ನಡೆಸಿದಾಗ ಮಕ್ಕಳಲ್ಲಿ ಕಾನ್ಫಿಡೆನ್ಸ್ ಟೆಸ್ಟ್ ಬಗ್ಗೆ ಉತ್ತಮ ಅಭಿಪ್ರಾಯಗಳು ಬಂದಿರುವ ಹಿನ್ನಲೆಯಲ್ಲಿ ಈ ಸಾಲಿನಲ್ಲೂ ಅತ್ಯಂತ ಸುಸೂತ್ರವಾಗಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. ಕಾನ್ಫಿಡೆನ್ಸ್ ಟೆಸ್ಟ್  ಬೆಳಗ್ಗೆ 9:30 ಕ್ಕೆ ಗಣಿತ ಹಾಗೂ ಮಧ್ಯಾಹ್ನ 1:30 ಗಂಟೆಗೆ ವಿಜ್ಞಾನ ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿ, ಕಾನ್ಫಿಡೆನ್ಸ್ ನ ಪ್ರಯೋಜನ ಪಡೆಯುವಂತೆ ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News