ಉಡುಪಿ ನಗರದಲ್ಲಿ ವಾಹನಗಳ ವೇಗದ ಮಿತಿ ಇಳಿಕೆ ಬಗ್ಗೆ ಪರಿಶೀಲನೆ

Update: 2019-01-18 13:50 GMT

ಉಡುಪಿ, ಜ.18: ಉಡುಪಿ ನಗರದಲ್ಲಿ ಖಾಸಗಿ ಬಸ್ ಸೇರಿದಂತೆ ಇತರ ವಾಹನಗಳು ಅತಿವೇಗದಿಂದ ಸಂಚರಿಸಿ ಪಾದಾಚಾರಿಗಳಲ್ಲಿ ಭೀತಿ ಹುಟ್ಟಿಸು ತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ವೇಗದ ಮಿತಿಯನ್ನು ಗಂಟೆಗೆ 50ಕಿ.ಮೀ. ನಿಂದ ಇಳಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಉಡುಪಿ ಪೊಲೀಸ್ ಕಚೇರಿಯಲ್ಲಿಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಹಿರಿಯ ನಾಗರಿಕರ ದೂರಿಗೆ ಈ ರೀತಿ ಪ್ರತಿಕ್ರಿ ಯಿಸಿದರು. ಅತಿವೇಗದಿಂದ ಸಂಚರಿಸುವ ಖಾಸಗಿ ಬಸ್‌ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರಗಿಸುವಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಎಸ್ಪಿ, ಈ ಬಾರಿ ದಂಡದ ಬದಲು ಬಸ್‌ಗಳನ್ನು ಮುಟ್ಟುಗೋಲು ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ತಿಳಿಸಿದರು.

ಕರಾವಳಿ ಬೈಪಾಸ್‌ನಿಂದ ಪರ್ಕಳದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಗಿದ ಬಳಿಕ ಅಗತ್ಯ ಇರುವ ಕಡೆ ಸಿಗ್ನಲ್ ಲೈಟ್‌ಗಳನ್ನು ಅಳ ವಡಿಸುವ ಕಾರ್ಯ ಮಾಡಲಾಗುತ್ತದೆ. ವಾಹನ ದಟ್ಟನೆ ಮಧ್ಯೆ ಸಾರ್ವಜನಿಕರಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಎಂಜಿಎಂ ಕಾಲೇಜು, ಮಣಿಪಾಲ ಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯ ಪೊಲೀಸ್ ಪೇದೆಯನ್ನು ನಿಯೋಜಿಸ ಲಾಗುವುದು ಎಂದು ಅವರು ಹೇಳಿದರು.

ರಿಕ್ಷಾಕ್ಕೆ ಕಲರ್ ಕೋಡಿಂಗ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿ ಕರೆ ಮಾಡಿದ್ದು, ಬಳಿಕ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್ಪಿ, ನಗರಸಭೆ ವ್ಯಾಪ್ತಿಯೊಳಗಿನ ರಿಕ್ಷಾಗಳನ್ನು ವಲಯ 1 ಮತ್ತು ಹೊರಗಿನ ರಿಕ್ಷಾಗಳನ್ನು ವಲಯ 2 ಎಂಬುದಾಗಿ ಪರಿಗಣಿಸಲಾಗಿದೆ. ಮುಂದೆ ವಲಯ 1ರ ರಿಕ್ಷಾಗಳು ನಗರಸಭಾ ವ್ಯಾಪ್ತಿಯೊಳಗಿನ ಯಾವುದೇ ರಿಕ್ಷಾ ನಿಲ್ದಾಣಗಳಲ್ಲಿ ಬಾಡಿಗೆ ನಡೆಸಬಹುದಾಗಿದೆ. ಈಗಾಗಲೇ ಆರ್‌ಟಿಓನಲ್ಲಿ ಕಲರ್ ಕೋಡಿಂಗ್ ಆರಂಭವಾಗಿದ್ದು, ಈವರೆಗೆ 50 ರಿಕ್ಷಾಗಳಿಗೆ ಕಲರ್ ಕೋಡಿಂಗ್ ಮಾಡ ಲಾಗಿದೆ. ಪ್ರತಿದಿನ 20 ರಿಕ್ಷಾಗಳಿಗೆ ಕಲರ್ ಕೋಡಿಂಗ್ ಮಾಡಲಾಗುತ್ತಿದೆ ಎಂದರು.

ಎಸ್ಪಿಯಿಂದ ನೈತಿಕತೆ ಪಾಠ: ಹೆಬ್ರಿ-ಬೇಳಂಜೆ ಮಾರ್ಗದಲ್ಲಿ ಖಾಸಗಿ ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುತ್ತಿರುವ ಶಾಲಾ ಕಾಲೇಜು ವಿದ್ಯಾರ್ಥಿ ಗಳು, ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ವೇಶ್ಯಾ ವಾಟಿಕೆ, ಬಸ್‌ಗಳಲ್ಲಿ ತಂಬಾಕು ಸೇವಿಸಿ ಉಗಿದು ಉಂಟಾಗಿರುವ ಅನೈರ್ಮಲ್ಯ ಹಾಗೂ ಹನುಮಂತನಗರ ಸರಕಾರಿ ಶಾಲೆಯ ಮಕ್ಕಳು ಸಿಗರೇಟು ಸೇದುವ ಕುರಿತ ಪ್ರತ್ಯೇಕ ದೂರುಗಳನ್ನು ನೀಡಿದ ಸಾರ್ವಜನಿಕರಿಗೆ ಎಸ್ಪಿ ನೈತಿಕತೆಯ ಪಾಠ ಹೇಳಿದರು.

ಶಾಲಾ ಮಕ್ಕಳು ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುವ ಬಗ್ಗೆ ಕೇವಲ ಕಾನೂನು ಕ್ರಮದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಕೂಡ ಮುಖ್ಯ. ಮಕ್ಕಳಿಗೆ ತಿಳಿಹೇಳುವ ಕೆಲಸವನ್ನು ಇವರು ಮಾಡಬೇಕು. ಇನ್ನೊಂದೆಡೆ ನಾವು ಕಾನೂನು ಮೂಲಕ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಎಸ್ಪಿ ಹೇಳಿದರು.

ವೇಶ್ಯಾವಾಟಿಕೆ ವಿರುದ್ಧ ಕಾನೂನಿನಡಿಯಲ್ಲಿ ಏನು ಮಾಡಲು ಆಗಲ್ಲ. ಅವರಿಗೆ ಕೆಲಸ ನೀಡಿದರೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರುವು ದಿಲ್ಲ. ಬಡತನದಿಂದ ಈ ವೃತ್ತಿಗೆ ಬಂದವರನ್ನು ಸರಿದಾರಿಗೆ ತರಬಹುದೇ ಹೊರತು ಹಣಕ್ಕಾಗಿ ಈ ವೃತ್ತಿ ನಡೆಸುವವರನ್ನು ಸರಿಪಡಿಸಲು ಸಾಧ್ಯವಿಲ್ಲ. ಅವರನ್ನು ಕರೆಸಿ ಮನುಪರಿವರ್ತನೆ ಮಾಡುವ ಕಾರ್ಯ ಆಗಬೇಕು ಎಂದರು.

ಉಪ್ಪುಂದ ಸರಕಾರಿ ಶಾಲೆಯ ಶಿಕ್ಷಕರು ಸರಿಯಾಗಿ ಪಾಠ ಮಾಡದ ಕುರಿತ ದೂರಿಗೆ ಸ್ಪಂದಿಸಿದ ಎಸ್ಪಿ, ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದರು. ಪಾರ್ಕಿಂಗ್ ಸಮಸ್ಯೆ ಕುರಿತ ದೂರಿಗೆ, ತಳ ಮಹಡಿಯಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿಗಳನ್ನು ನಿರ್ಮಿಸಿರುವ ಕಟ್ಟಡಗಳ ವಿರುದ್ಧ ನಗರಸಭೆ ಕ್ರಮ ತೆಗೆದುಕೊಂಡರೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡ ಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಸೆನ್ ಅಪ ರಾಧ ಪೊಲೀಸ್ ಠಾಣೆಯ ನಿರೀಕ್ಷಕ ಸೀತಾರಾಮ್, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ನಗರ ಸಂಚಾರ ಠಾಣಾ ಉಪನಿರೀಕ್ಷಕ ನಾರಾಯಣ ಗಾಣಿಗ ಮೊದಲಾದವರು ಹಾಜರಿದ್ದರು.

ಮಟ್ಕಾ: ಓರ್ವ ಆರೋಪಿ ಗಡಿಪಾರು

ಮಟ್ಕಾ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿರುವ 10 ಮಂದಿಯ ಪೈಕಿ ಓರ್ವ ಆರೋಪಿಯನ್ನು ಮೂರು ತಿಂಗಳ ಕಾಲ ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಉಳಿದ ಒಂಭತ್ತು ಮಂದಿ ಆರೋಪಿಗಳನ್ನು ಗಡಿಪಾರು ಮಾಡುವ ಕುರಿತು ವಿಚಾರಣೆ ನಡೆಯುತ್ತಿದೆ. ಮಟ್ಕಾ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾ ಚರಣೆ ಮುಂದುವರೆಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

ನಾಗೂರು ಪ್ರಕರಣ: ತಂಡ ರಚನೆ

ನಾಗೂರು ಮಸೀದಿ ಆವರಣದಲ್ಲಿ ಹಂದಿ ಮಾಂಸ ಎಸೆದು ಹೋಗಿರುವ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಿ, ಸಿಸಿಟಿವಿ ಫುಟೇಜ್ ಆಧಾರದಲ್ಲಿ ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

ಕಳೆದ ಮೂರು ವಾರಗಳ ಪ್ರಕರಣ

ಡಿ.21ರಿಂದ ಉಡುಪಿ ಜಿಲ್ಲೆಯಲ್ಲಿ 10 ಮಟ್ಕಾ ಪ್ರಕರಣದಲ್ಲಿ 10 ಮಂದಿ ಹಾಗೂ ಒಂದು ಜೂಜಾಟ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಉಳಿದಂತೆ ಒಂದು ಅಕ್ರಮ ಮದ್ಯ ಮಾರಾಟ, ಒಂದು ಅಕ್ರಮ ಗಾಂಜಾ ಸೇವನೆ, 66 ಕೋಟ್ಪಾ, 15 ಕುಡಿದು ವಾಹನ ಚಾಲನೆ, 182 ಕರ್ಕಶ ಹಾರ್ನ್, 88 ಮೊಬೈಲ್ ಬಳಸಿ ವಾಹನ ಚಾಲನೆ, 2825 ಹೆಲ್ಮೆಟ್ ಧರಿಸದೆ ವಾಹನ ಚಾಲನೆ, 104 ಅತಿವೇಗದ ಚಾಲನೆ, 4595 ಇತರ ಮೊಟಾರು ಕಾಯಿದೆ ಯಡಿ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News