ಮಂಗಳೂರು: ಏಷ್ಯಾ ವೆಡ್ಡಿಂಗ್ ಫೇರ್ ಶುಭಾರಂಭ

Update: 2019-01-18 14:06 GMT

ಮಂಗಳೂರು, ಜ.18: ದಕ್ಷಿಣ ಭಾರತದ ಅತ್ಯಂತ ಮನಮೋಹಕ ವಿವಾಹ ಮತ್ತು ಆಭರಣಗಳ ಪ್ರದರ್ಶನ ‘ಏಷ್ಯಾ ವೆಡ್ಡಿಂಗ್ ಫೇರ್-2019’ ಶುಕ್ರವಾರ ಕೊಡಿಯಾಲ್‌ ಬೈಲ್‌ನ ಟಿಎಂಎ ಪೈ ಇಂಟರ್‌ ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ ನಲ್ಲಿ ಶುಭಾರಂಭಗೊಂಡಿತು.

ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಎ.ವಿ.ಆರ್. ಜ್ಯುವೆಲ್ಲರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಎ.ಬಿ.ಎಸ್. ಸಂಜಯ್, ಏಷ್ಯಾ ವೆಡ್ಡಿಂಗ್ ಫೇರ್ ಮಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಇಲ್ಲಿ ವಿವಿಧ ರೀತಿಯ ಜ್ಯುವೆಲ್ಲರಿ, ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಮಂಗಳೂರಿನ ಜನತೆಯಿಂದ ಹೆಚ್ಚಿನ ಸ್ಪಂದನೆಯನ್ನು ನಿರೀಕ್ಷಿಸುತ್ತೇವೆ ಎಂದರು.

ಎ.ವಿ.ಆರ್. ಜ್ಯುವೆಲ್ಲರ್ಸ್‌ನ ನಿರ್ದೇಶಕಿ ಸೌಮ್ಯಾ ಮಾತನಾಡಿ, ಪ್ರದರ್ಶನದಲ್ಲಿ ಮಹಿಳೆಯರಿಗೆ ಬೇಕಾಗುವ ವಿವಿಧ ಬಟ್ಟೆಬರೆ, ಆಭರಣಗಳ ಸಂಗ್ರಹವಿದೆ. ಚಿನ್ನಾಭರಣಗಳಿಗೆ ಬೆಂಗಳೂರಿನ ಬಳಿಕ ಮಂಗಳೂರಿನಲ್ಲೇ ಅತ್ಯಧಿಕ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಪ್ರದರ್ಶನದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ ಎಂದರು.

ಈ ಸಂದರ್ಭ ಬೆಂಗಳೂರು ದೀಪಂ ಸಿಲ್ಕ್ಸ್‌ನ ನಿರ್ದೇಶಕ ವಿಜಯ್ ಶೇಖರ್, ಕಾರ್ಯಕ್ರಮ ಸಂಘಟಕ ಹರೀಶ್ ಸಚ್‌ದೇವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇಂಟ್ರಡಕ್ಷನ್ ಟ್ರೇಡ್ ಶೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆಯೋಜಿಸಿರುವ ಈ ಪ್ರದರ್ಶನವು ಜ. 20ರವರೆಗೆ ನಡೆಯಲಿದ್ದು, ಗ್ರಾಹಕರಿಗೆ ಪ್ರವೇಶ ಉಚಿತವಾಗಿರುತ್ತದೆ.

ಪ್ರದರ್ಶನದ ವಿಶೇಷತೆ: ಮದುವೆ ಸಮಾರಂಭದಲ್ಲಿ ಧರಿಸುವ ದೇಶ, ವಿದೇಶಗಳ ಸರ್ವಶ್ರೇಷ್ಠ ವಿನ್ಯಾಸದಿಂದ ಕೂಡಿದ ಆಭರಣ, ರೇಷ್ಮೆ ಸೀರೆಗಳು, ಕಸೂತಿಯಿಂದ ಕೂಡಿದ ಉಡುಪುಗಳು, ಅಲಂಕಾರಿಕ ಉತ್ಪನ್ನಗಳು, ಹನಿಮೂನ್ ಪ್ಯಾಕೇಜ್ ಆಯೋಜಕರು ಸೇರಿದಂತೆ ಮದುವೆಗೆ ಬೇಕಾದ ಎಲ್ಲ ತರದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಇದಾಗಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಅಪರೂಪದ ಉತ್ಪನ್ನಗಳು ಲಭ್ಯವಾಗಲಿದ್ದು, ದೇಶದ ಪ್ರತಿಷ್ಠಿತ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ.

ವಧುವಿನ ಆಭರಣ, ರೇಷ್ಮೆ ಸೀರೆ, ರೇಷ್ಮೆ ಉಡುಪು, ನಾನಾ ಸಮುದಾಯದ ಜನರು ಧರಿಸುವ ಬಟ್ಟೆಗಳು, ವಧುವಿನ ಉಡುಗೆ, ಸಾಂಪ್ರದಾಯಿಕ ಆಭರಣ, ಅಮೂಲ್ಯ ಹರಳುಗಳು, ಮುತ್ತಿನ ಆಭರಣ, ಮದುವೆಯ ಪರಿಕರ, ಪ್ರೀಮಿಯಂ ಬೆಡ್‌ಶೀಟ್ - ಸ್ಪ್ರೇಡ್, ಹೋಟೆಲ್, ರಿಸಾರ್ಟ್, ಹನಿಮೂನ್ ತಾಣಗಳು ಹೀಗೆ ಮದುವೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳು ಒಂದೇ ಸೂರಿನಡಿ ಸಿಗಲಿವೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನವೀನ ವಿನ್ಯಾಸದ ಆಭರಣಗಳು

ದೇಶದ ಪ್ರತಿಷ್ಠಿತ ಸಂಸ್ಥೆಗಳು ಅಂತರ್‌ರಾಷ್ಟ್ರೀಯ ಆಭರಣಗಳ ನವ ನವೀನ ವಿನ್ಯಾಸವನ್ನು ಈ ಮೇಳದಲ್ಲಿ ಪರಿಚಯಿಸಲಿವೆ. ಮದುವೆಯ ಅಗತ್ಯಗಳನ್ನು ಪೂರೈಸುವ ದೇಶದ ಪ್ರತಿಷ್ಠಿತ ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.

ಬೆಂಗಳೂರು, ಹೊಸದಿಲ್ಲಿ, ಮುಂಬೈಯ ಸಂಸ್ಥೆಗಳು ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಲಿವೆ. ಇದರಿಂದಾಗಿ ಗ್ರಾಹಕರಿಗೆ ಆಯ್ಕೆ ಮಾಡಲು ಮತ್ತು ಹೊಸ ಹೊಸ ವಿನ್ಯಾಸಗಳನ್ನು ನೋಡಲು ಅವಕಾಶವಾಗಿದೆ. ದೀಪಂ ಸಿಲ್ಕ್, ವಿಜಯಲಕ್ಷ್ಮೀ ಸಿಲ್ಕ್ ಆ್ಯಂಡ್ ಸಾರೀಸ್, ಆರ್‌ಎಂಕೆವಿ ವೆಡ್ಡಿಂಗ್ ಸಿಲ್ಕ್ ಸಾರೀಸ್, ಎವಿಆರ್ ಜುವೆಲ್ಲರೀಸ್, ಶ್ರೀ ಗಣೇಶ್ ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರೀಸ್, ನಿಖಾರ್ ಜ್ಯುವೆಲ್ಸ್ ಮುಂತಾದ ಸಂಸ್ಥೆಗಳು ಭಾಗವಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News