ಜ.19-20: ದೇರಳಕಟ್ಟೆ ರೇಂಜ್ ವಿದ್ಯಾರ್ಥಿ ಫೆಸ್ಟ್

Update: 2019-01-18 14:40 GMT

ಮಂಗಳೂರು, ಜ.18: ದೇರಳಕಟ್ಟೆ ರೇಂಜ್ ಮಟ್ಟದ 15ನೇ ಇಸ್ಲಾಮಿಕ್ ಕಲಾಮೇಳವು ಜ.19 ಮತ್ತು 20ರಂದು ನಾಟೆಕಲ್ ಸಮೀಪದ ಉರುಮನೆ-ಮಂಗಳನಗರ ನೂರುಲ್ ಇಸ್ಲಾಮ್ ಮದ್ರಸದಲ್ಲಿ ನಡೆಯಲಿದೆ. ಕಿಡ್ಡೀಸ್, ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್ ಎಂಬ 5 ವಿಭಾಗಗಳಲ್ಲಿ ನಡೆಯುವ ಸುಮಾರು 50ರಷ್ಟು ಸ್ಪರ್ಧೆಗಳಿಗೆ 36 ಮದ್ರಸಗಳ 1,000 ಸ್ಪರ್ಧಾರ್ಥಿಗಳು ಭಾಗವಹಿಸಲಿರುವರು.

ಜ.19ರಂದು ಬೆಳಗ್ಗೆ 8ಗಂಟೆಗೆ ಅಸೈಯ್ಯದ್ ಅಲೀ ತಂಙಳ್ ದುಆದೊಂದಿಗೆ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳನಗರ ಜಮಾಅತ್‌ನ ಅಧ್ಯಕ್ಷ ಅಬೂಸ್ವಾಲಿಹ್ ಹಾಜಿ ಅಧ್ಯಕ್ಷತೆ ವಹಿಸುವರು. ದೇರಳಕಟ್ಟೆ ರೇಂಜ್ ಮದ್ರಸಾ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಅಧ್ಯಕ್ಷ ಇಸ್ಮಾಯೀಲ್ ಹಾಜಿ ದೇರಳಕಟ್ಟೆ ಧ್ವಜಾರೋಹಣ ನಿರ್ವಹಿಸುವರು. ಬಳಿಕ ವಿದ್ಯಾರ್ಥಿಗಳ ಅತ್ಯಾಕರ್ಷಕ ಕಲಾ ಸಾಹಿತ್ಯ ಸ್ಪರ್ಧೆಗಳು ನಡೆಯಲಿವೆ.

ಜ.20ರ ಸಂಜೆ ಸಮಾರೋಪ ಸಮಾರಂಭ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯು ನಡೆಯಲಿದೆ ಎಂದು ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News