ಹಿರಿಯಡಕ: ರಾಜ್ಯ ಮಟ್ಟದ ವಿಚಾರ ಸಂಕಿರಣ

Update: 2019-01-18 14:48 GMT

ಉಡುಪಿ, ಜ.18: ರಾಜ್ಯ ಎನ್ನೆಸ್ಸೆಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಹಾಗೂ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಜ. 29 ಮತ್ತು 30ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆಗೆ ಅವಕಾಶವಿದ್ದು, ಆಸಕ್ತ ಎನ್ನೆಸ್ಸೆಸ್ ಯೋಜನಾಧಿಕಾರಿಗಳು, ಎನ್ನೆಸ್ಸೆಸ್ ಸ್ವಯಂಸೇವಕರು ಹಾಗೂ ಆಸಕ್ತ ಅಧ್ಯಾಪಕರು ಪ್ರಬಂಧವನ್ನು ಮಂಡಿಸಬಹುದಾಗಿದೆ. ಆಸಕ್ತರು 200-300 ಪದಗಳ ವ್ಯಾಪ್ತಿಯಲ್ಲಿ ಸಾರ ಲೇಖನವನ್ನು ಸಿದ್ಧಪಡಿಸಿ ಜ.25ರೊಳಗೆ ಈ-ಮೇಲ್ ಮೂಲಕ ತಲುಪಿಸುವಂತೆ ತಿಳಿಸಲಾಗಿದೆ.

ಪ್ರಬಂಧ ಮಂಡನೆಗೆ ವಿಷಯಗಳು: ಪ್ರಜಾಪ್ರುತ್ವ-ಅಂಬೇಡ್ಕರ್‌ರ ದೃಷ್ಟಿಕೋನ, ದಲಿತರ ರಾಜಕೀಯ ಸ್ವಾಯತ್ತತೆ- ಅಂಬೇಡ್ಕರ್‌ರ ಕೊಡುಗೆಗಳು, ಅಸ್ಪಶ್ಯತೆಯ ಹುಟ್ಟು ಮತ್ತು ಆಚರಣೆ-ಅಂಬೇಡ್ಕರ್‌ರ ವಿಚಾರಧಾರೆ, ದಲಿತ ಪ್ರಾತಿನಿಧ್ಯ;ಗಾಂಧಿ-ಅಂಬೇಡ್ಕರ್ ಸಂವಾದ, ಭಾರತ ಸಂವಿಧಾನದ ಮೂಲತತ್ವಗಳು-ಅಂಬೇಡ್ಕರ್‌ರ ನಿಲುಮಗಳು, ಅಂಬೇಡ್ಕರ್‌ರ ಚಳುವಳಿಗಳು, ಅಂಬೇಡ್ಕರ್‌ರ ಬದುಕಿನ ಕಥನ, ಅಂಬೇಡ್ಕರ್‌ರ ಸಂವಿಧಾನದ ಆಶಯಗಳು, ಸಮಾನತೆ, ಸಹೋದರತ್ವಗಳ ಕುರಿತು ಅಂಬೇಡ್ಕರ್‌ರ ವೈಚಾರಿಕತೆ.

ಹೆಚ್ಚಿನ ಮಾಹಿತಿಗೆ ಇ-ಮೇಲ್ sakahiriadka@gmail.com, ವಿಳಾಸ: ದೂರವಾಣಿಸಂಖ್ಯೆ:0820-2542575, 9483146413, 9164165883, 6361953401ನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News