ಅಜೀಂ ಪ್ರೇಮ್‌ಜಿ ವಿವಿಯಿಂದ ಅರ್ಜಿ ಆಹ್ವಾನ

Update: 2019-01-18 14:50 GMT

ಉಡುಪಿ, ಜ.18: ಬೆಂಗಳೂರಿನ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯವು ಮೂರು ಸ್ನಾತಕೋತ್ತರ ಪದವಿಗಳಿಗೆ- ಎಂಎ-ಎಜ್ಯುಕೇಶನ್, ಎಂಎ- ಡೆವಲಪ್‌ಮೆಂಟ್, ಎಂಎ- ಪಬ್ಲಿಕ್ ಪಾಲಿಸಿ ಆ್ಯಂಡ್ ಗವರ್ನೆನ್ಸ್- ಅರ್ಜಿ ಗಳನ್ನು ಆಹ್ವಾನಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜ.26 ಕೊನೆಯ ದಿನವಾಗಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಉಡುಪಿಯ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಫೆ.10ರ ರವಿವಾರ ನಡೆಯಲಿದೆ. ಯಾವುದೇ ಪದವಿಯ ಅಂತಿಮ ವರ್ಷ ದಲ್ಲಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರ ಮೀಸಲಾತಿ, ಆಕರ್ಷಕ ಶಿಷ್ಯ ವೇತನ ಹಾಗೂ ಸ್ನಾತಕೋತ್ತರ ಪದವಿ ಬಳಿಕ ವಿವಿ ವತಿಯಿಂದ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ. ಆಸಕ್ತರು ಟೋಲ್‌ಫ್ರಿ ಸಹಾಯವಾಣಿ ನಂ.:1800 843 2001, ಅಥವಾ- admissions@apu.edu.in, ವಿವಿಯ ವೆಬ್‌ಸೈಟ್- www.azimpremjiuniversity.edu.in-ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News