ಕೊಲಂಬಿಯ: ಪೊಲೀಸ್ ಅಕಾಡಮಿಯಲ್ಲಿ ಸ್ಫೋಟ: 21 ಸಾವು

Update: 2019-01-18 15:39 GMT

ಬೊಗೊಟ, ಜ. 18: ಕೊಲಂಬಿಯ ರಾಜಧಾನಿ ಬೊಗೊಟದ ಪೊಲೀಸ್ ಕೆಡೆಟ್ ತರಬೇತಿ ಅಕಾಡಮಿಯಲ್ಲಿ ಗುರುವಾರ ನಡೆದ ಕಾರ್‌ಬಾಂಬ್ ಸ್ಫೋಟವೊಂದರಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಹಾಗೂ 68 ಮಂದಿ ಗಾಯಗೊಂಡಿದ್ದಾರೆ.

ಇದು ಬೊಗೊಟದಲ್ಲಿ 16 ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

ಕೊಲಂಬೊ ಸರಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

ಈ ಭಯೋತ್ಪಾದಕ ದಾಳಿಗೆ 80 ಕಿಲೋಗ್ರಾಂ ಸ್ಫೋಟಕಗಳನ್ನು ಹೊಂದಿದ ಕಾರನ್ನು ಬಳಸಲಾಗಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಆತ್ಮಹತ್ಯ ಕಾರ್ ಬಾಂಬರ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಬೊಗೊಟದಲ್ಲಿರುವ ಜನರಲ್ ಫ್ರಾನ್ಸಿಸ್ಕೊ ಡಿ ಪೌಲಾ ಸ್ಯಾಂಟಾಂಡರ್ ಆಫಿಸರ್ ಶಾಲೆಯಲ್ಲಿ ನಡೆಯುತ್ತಿದ್ದ ಕೆಡೆಟ್‌ಗಳ ಭಡ್ತಿ ಸಮಾರಂಭದ ವೇಳೆ ಬಾಂಬ್ ಸ್ಫೋಟಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News