ಬಿಜೆಪಿಗೆ ಮಾಜಿ ಸಂಸದ ಉದಯ ಸಿಂಗ್ ರಾಜೀನಾಮೆ; ಮಹಾಮೈತ್ರಿ ಸೇರಲು ಸಜ್ಜು

Update: 2019-01-18 16:23 GMT

ಪಾಟ್ನಾ,ಜ.18: ಬಿಹಾರದ ಪುರ್ನಿಯಾ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಮಾಜಿ ಬಿಜೆಪಿ ಸಂಸದ ಉದಯ ಸಿಂಗ್ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ. ಬಿಜೆಪಿಯು ಈಗಾಗಲೇ ಹೆಸರು ಕೆಡಿಸಿಕೊಂಡಿರುವ ಜೆಡಿಯುಗೆ ಶರಣಾಗಿದೆ ಎಂದು ಅವರು ಆರೋಪಿಸಿದ್ದಾರೆ. ತಾನು ಮಹಾಮೈತ್ರಿಯ ಪಕ್ಷವೊಂದನ್ನು ಸೇರುವ ಸುಳಿವುಗಳನ್ನು ಅವರು ನೀಡಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚುತ್ತಿದೆ,ಆದರೆ ತಾನು ನಿಷ್ಠೆಯಿಂದ ಬೆಂಬಲಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೂ ವಾಸ್ತವತೆಯಿಂದ ದೂರವಾಗುತ್ತಿರುವಂತಿದೆ ಎಂದ ಅವರು,ತಾನು ಬಿಜೆಪಿಯಲ್ಲಿದ್ದರೂ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯನ್ನೆಂದೂ ಒಪ್ಪಿಕೊಂಡಿರಲಿಲ್ಲ. ಪ್ರತಿಪಕ್ಷವು ಅಳಿದು ಹೋದರೆ ಪ್ರಜಾಪ್ರಭುತ್ವ ಕೆಲಸ ಮಾಡುವುದಿಲ್ಲ ಎಂದರು.

ಸಿಂಗ್ ಅವರ ಹಿರಿಯ ಸೋದರ ಎನ್.ಕೆ.ಸಿಂಗ್ ಅವರು 15ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದಾರೆ. 2014ರಲ್ಲಿ ಮೋದಿ ಅಲೆಯಿದ್ದರೂ ಸಿಂಗ್ ಜೆಡಿಯು ಅಭ್ಯರ್ಥಿಯೆದುರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News