ಗಡಿಯಲ್ಲಿ ಯುದ್ಧವಿಲ್ಲ, ಆದರೆ ಯೋಧರು ಹುತಾತ್ಮರಾಗುತ್ತಿದ್ದಾರೆ: ಮೋಹನ್ ಭಾಗವತ್

Update: 2019-01-18 17:06 GMT

 ನಾಗಪುರ, ಜ. 18: ಗಡಿಯಲ್ಲಿ ಯುದ್ಧ ಇಲ್ಲ. ಆದರೆ, ಯೋಧರು ಹುತಾತ್ಮರಾಗುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ವರಿಷ್ಠ ಮೋಹನ್ ಭಾಗವತ್ ಹೇಳಿದ್ದಾರೆ. ದೇಶದಲ್ಲಿ ಯುದ್ಧದ ಪರಿಸ್ಥಿತಿ ಇಲ್ಲದೇ ಇದ್ದರೂ ಯೋಧರು ಹುತಾತ್ಮರಾಗುತ್ತಿದ್ದಾರೆ. ಇದರ ವಿರುದ್ಧ ಹೋರಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಯುದ್ಧದ ಪರಿಸ್ಥಿತಿ ಇಲ್ಲದೇ ಇದ್ದರೂ ಯೋಧರು ಹುತಾತ್ಮರಾಗುವುದಕ್ಕೆ ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡದೇ ಇರುವುದೇ ಮುಖ್ಯ ಕಾರಣ. ಈ ದಿಸೆಯಲ್ಲಿ ನಾವು ಶ್ರಮಿಸಬೇಕಿದೆ ಎಂದು ಅವರು ಹೇಳಿದರು. ನಮ್ಮ ದೇಶ ಉನ್ನತ ಸ್ಥಾನಕ್ಕೆ ತಲುಪಲು, ನಾವು ತ್ಯಾಗವನ್ನು ಕಲಿಯಬೇಕು. ಪ್ರತಿಯೊಬ್ಬರೂ ಈ ದಿಶೆಯಲ್ಲಿ ಪ್ರಯತ್ನಿಸಬೇಕು. ಇದನ್ನು ನಾವು ಇನ್ನೊಬ್ಬರಿಗೆ ಗುತ್ತಿಗೆ ನೀಡುವಂತೆ ಅಲ್ಲ. ಈ ಕೆಲಸವನ್ನು ಸರಕಾರ ಮಾಡುತ್ತದೆ, ಸೇನೆ ಮಾಡುತ್ತದೆ, ಪೊಲೀಸ್ ಮಾಡುತ್ತದೆ ಎಂದು ನಾವು ಭಾವಿಸಬಾರದು. ಸಂಪೂರ್ಣ ಸಮಾಜ ಈ ದಿಸೆಯಲ್ಲಿ ಶ್ರಮಿಸಬೇಕು ಎಂದು ಮೋಹನ್ ಭಾಗವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News