ಜ. 20: ಅಮೆಮಾರ್ ನಲ್ಲಿ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅನುಸ್ಮರಣೆ

Update: 2019-01-19 14:14 GMT

ಫರಂಗಿಪೇಟೆ, ಜ. 19, ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮಾರ್ ಇದರ ಆಶ್ರಯದಲ್ಲಿ ಜ. 20 ರಂದು ಮಸೀದಿ ವಠಾರದಲ್ಲಿ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಮತ್ತು ಜಮಾಲುದ್ದೀನ್ ಪೈಝಿ ಉಸ್ತಾದ್ ಅವರ ಅನುಸ್ಮರಣೆ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಅಮೆಮಾರ್ ಮಸೀದಿ ಮುದರಿಸ್ ಅಬೂಸ್ವಾಲಿಹಿ ಪೈಝಿ, ಕೇಂದ್ರ ಜುಮ್ಮಾ ಮಸೀದಿ ಮಂಗಳೂರು ಮುದರಿಸ್ ಸದಕತುಲ್ಲಾ ಪೈಝಿ, ಫರಂಗಿಪೇಟೆ ಮಸೀದಿ ಮುದರಿಸ್ ಅಬ್ಬಾಸ್ ದಾರಿಮಿ, ಮಾರಿಪ್ಪಳ್ಳ ಮಸೀದಿ ಮುದರಿಸ್ ಖಲೀಲ್ ದಾರಿಮಿ, ಇರ್ಶಾದ್ ದಾರಿಮಿ ಮಿತ್ತಬೈಲ್ ಅನುಸ್ಮರಣೆಯಲ್ಲಿ ಉಪಾನ್ಯಾಸ ನೀಡಲಿದ್ದಾರೆ.

ಸಭಾ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಉಮರಬ್ಬ ವಹಿಸಲಿದ್ದಾರೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News