ಎ.ಜೆ.ಆಸ್ಪತ್ರೆಯಲ್ಲಿ ಒಬೆಸಿಟಿ ಕ್ಲಿನಿಕ್ ಆರಂಭ: ದೇಹದ ಬೊಜ್ಜು ಕರಗಿಸಲು ಪರಿಣಾಮಕಾರಿ ಚಿಕಿತ್ಸೆ

Update: 2019-01-19 15:05 GMT

ಮಂಗಳೂರು, ಜ.19: ದೇಹದ ಬೊಜ್ಜು ಕರಗಿಸಲು ಹಾಗೂ ಪೂರಕ ಅಡ್ಡ ಪರಿಣಾಮಗಳಿಂದ ರಕ್ಷಣೆ ಒದಗಿಸಲು ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ‘ಒಬೆಸಿಟಿ ಕ್ಲಿನಿಕ್’ ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಆರಂಭಗೊಂಡಿದೆ.

‘ಒಬೆಸಿಟಿ ಕ್ಲಿನಿಕ್’ ಉದ್ಘಾಟಿಸಿ ಮಾತನಾಡಿದ ಕ್ಲಿನಿಕ್‌ನ ಮುಖ್ಯ ಸಲಹೆಗಾರ, ಹೈದರಾಬಾದ್‌ನ ಡಾ.ಅಮರ್‌ಬ್ಯಾರಿಯಾಟ್ರಿಕ್ ಆ್ಯಂಡ್ ಮೆಟಬೋಲಿಕ್ ಸೆಂಟರ್‌ನ ಸರ್ಜನ್‌ಡಾ.ಅಮರ್ ವೆನ್ನಪುಸ, ಜೀವನ ಶೈಲಿಯಿಂದ ಉಂಟಾಗುವ ಬೊಜ್ಜು ಹಾಗೂ ಮಧುಮೇಹ ಆರೋಗ್ಯ ಸಮಸ್ಯೆಯ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅತಿಯಾದ ಬೊಜ್ಜು ಹಾಗೂ ಮಧುಮೇಹದ ಅಡ್ಡ ಪರಿಣಾಮ ತಡೆಯಲು ಮೆಟೊಬಾಲಿಕ್‌ಶಸ್ತ್ರಚಿಕಿತ್ಸೆ ವರದಾನವಾಗಿದ್ದು, ಈ ಹಿನ್ನೆಲೆಯಲ್ಲಿ ಪರಿಣಿತ ತಜ್ಞರನ್ನು ಒಳಗೊಂಡು ಎ.ಜೆ. ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿರುವ ನೂತನ ಕ್ಲಿನಿಕ್ ಈ ಭಾಗದ ಜನರಿಗೆ ಹೆಚ್ಚಿನ ನೆರವಾಗಲಿದೆ ಎಂದು ಹೇಳಿದರು.

ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ನಿದ್ದೆ, ಸಕಾಲದಲ್ಲಿ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬಹುದು. ಅಲ್ಲದೆ ಬೊಜ್ಜು ಮತ್ತು ಮಧುಮೇಹದ ಸಾಧ್ಯತೆಯಿಂದ ದೂರ ಉಳಿಯಬಹುದು. ಮೆಟಾಬಾಲಿಕ್ ಸರ್ಜರಿ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಆದರೆ ಒಬೆಸಿಟಿಯು ಪರಿಣಾಮಕಾರಿ ಹಾಗೂ ಸುರಕ್ಷಿತ ಶಸಚಿಕಿತ್ಸೆಯಾಗಿದೆ ಎಂದು ಡಾ.ಅಮರ್ ವೆನ್ನಪುಸ ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎ.ಜೆ.ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಒಬೆಸಿಟಿ ಕ್ಲಿನಿಕ್ ದೇಹದ ಅತಿಯಾದ ತೂಕವನ್ನು ಇಳಿಸಲು ಸಹಾಯಕವಾದ ಒಂದು ಸಮಗ್ರ ವೈದ್ಯಕೀಯ ಸೌಲಭ್ಯವಾಗಿದೆ. ಜನರ ಆರೋಗ್ಯ ವೃದ್ಧಿಸಲು ಹಾಗೂ ಆಧುನಿಕ ಸೌಕರ್ಯ ಜತೆಗೆ ಗುಣಮಟ್ಟದ ಸೇವೆ ಒದಗಿಸುವುದು ಎ.ಜೆ. ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.ಆ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯು ಸೇರ್ಪಡೆಯಾಗಿದೆ ಎಂದರು.

ಬೊಜ್ಜಿಗೆ ವೈದ್ಯಕೀಯ ನಿರ್ವಹಣೆ ಕುರಿತು ಎಂಡೋಕ್ರಾನಲಾಜಿಸ್ಟ್ ತಜ್ಞ ಡಾ. ಗಣೇಶ್ ಎಚ್.ಕೆ ಮಾತನಾಡಿ, ಪ್ರಸ್ತುತ ಶೇ.40ರಿಂದ 70ರಷ್ಟು ವಂಶಾವಳಿ ರೂಪದಲ್ಲಿ ಬೊಜ್ಜು ಬಂದಿರುತ್ತದೆ. ಇದರ ಜತೆಯಲ್ಲಿ ಕೆಲವೊಂದು ರೋಗಕ್ಕೆ ತೆಗೆದುಕೊಳ್ಳುವ ಔಷಧ, ಜೀವನ ಶೈಲಿ, ದೇಹಕ್ಕೆ ಸರಿಯಾದ ವ್ಯಾಯಾಮ ಇಲ್ಲದಿರುವುದು ಕೂಡ ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗಿದೆ ಎಂದರು.

ದೇಹದಲ್ಲಿ ಮಿತಿಮೀರುವ ಬೊಜ್ಜು ಮಧುಮೇಹ, ಬಿಪಿ ಮತ್ತಿತರ ರೋಗಗಳಿಗೆ ಆಹ್ವಾನ ನೀಡುತ್ತದೆ. ಒಬೆಸಿಟಿ ಕ್ಲಿನಿಕ್‌ನಲ್ಲಿ ವಿಶೇಷ ತಜ್ಞರಿಂದ ಡಯಟ್, ಪಿಸಿಯೋಥೆರಪಿ, ಎಂಡೋಕ್ರಾನಲಾಜಿಸ್ಟ್ ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ ಎಂದು ಸರ್ಜಿಕಲ್ ಗ್ಯಾಸ್ಟ್ರೊಲಾಜಿಸ್ಟ್ ಸಲಹೆಗಾರ ಡಾ.ರೋಹನ್‌ಶೆಟ್ಟಿ ಹೇಳಿದರು.

ಎ.ಜೆ.ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ ಮಾರ್ಲ ಸ್ವಾಗತಿಸಿದರು. ಡಾ. ಆಶ್ವಿನ್ ಆಳ್ವ ವಂದಿಸಿದರು. ಎಲ್‌ಎಂಇಟಿ ಉಪಾಧ್ಯಕ್ಷ ಎ.ಪ್ರಶಾಂತ ಶೆಟ್ಟಿ, ಡಾ.ಅಶೋಕ್‌ಹೆಗ್ಡೆ, ಡಾ.ಗಣೇಶ್, ಡಾ.ಶಿವಪ್ರಸಾದ್, ಡಾ.ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News