ಇಂಧನ ಪೈಪ್‌ಲೈನ್‌ನಲ್ಲಿ ಸ್ಫೋಟ; 20 ಸಾವು

Update: 2019-01-19 15:18 GMT

ಮೆಕ್ಸಿಕೊ ಸಿಟಿ, ಜ. 19: ಮಧ್ಯ ಮೆಕ್ಸಿಕೊದಲ್ಲಿ ಇಂಧನ ಸಾಗಿಸುವ ಪೈಪ್‌ಲೈನೊಂದರಲ್ಲಿ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಹಾಗೂ 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೈಪ್‌ಲೈನ್‌ನಲ್ಲಿ ಪೆಟ್ರೋಲ್ ಸೋರಿಕೆಯಾಗುತ್ತಿತ್ತು ಹಾಗೂ ಅದನ್ನು ಬಕೆಟ್ ಗಳಲ್ಲಿ ಸಂಗ್ರಹಿಸಲು ಜನರು ಅಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಆಗ ಸ್ಫೋಟ ಸಂಭವಿಸಿದೆ.

ಹಿಡಲ್ಗೊ ರಾಜ್ಯದ ಸಣ್ಣ ಪಟ್ಟಣವೊಂದರ ಮೂಲಕ ಹಾದುಹೋಗುವ ಪೆಟ್ರೋಲಿಯಂ ಪೈಪ್‌ಲೈನ್‌ನಿಂದ ಕಳ್ಳರು ಇಂಧನ ಕದ್ದ ಬಳಿಕ ಅಲ್ಲಿ ಸೋರಿಕೆಯುಂಟಾಗಿತ್ತು.

ಪೈಪ್‌ನಿಂದ ಪೆಟ್ರೋಲ್ ಡಝನ್‌ಗಟ್ಟಳೆ ಅಡಿ ಮೇಲಕ್ಕೆ ಹಾರುತ್ತಿತ್ತು ಹಾಗೂ ಜನರು ಭಾರೀ ಸಂಖ್ಯೆಯಲ್ಲಿ ಬಕೆಟ್ ಗಳು, ಕ್ಯಾನ್‌ಗಳು ಮತ್ತು ಇತರ ಪಾತ್ರೆಗಳಲ್ಲಿ ಅದನ್ನು ಸಂಗ್ರಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News