ಸುಳ್ಳು ಹೇಳಲು ಟ್ರಂಪ್ ವಕೀಲನಿಗೆ ಹೇಳಿಲ್ಲ: ರಾಬರ್ಟ್ ಮಲ್ಲರ್

Update: 2019-01-19 15:23 GMT

ವಾಶಿಂಗ್ಟನ್, ಜ. 19: ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡವು ರಶ್ಯದೊಂದಿಗೆ ನಂಟು ಹೊಂದಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ, ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಸುಳ್ಳು ಹೇಳುವಂತೆ ಟ್ರಂಪ್ ತನ್ನ ಮಾಜಿ ವಕೀಲ ಮೈಕಲ್ ಕೋಹನ್‌ಗೆ ಸೂಚನೆ ನೀಡಿದ್ದರು ಎಂಬ ಮಾಧ್ಯಮ ವರದಿಯೊಂದನ್ನು ಈ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ವಕೀಲ ರಾಬರ್ಟ್ ಮಲ್ಲರ್ ತಿರಸ್ಕರಿಸಿದ್ದಾರೆ.

‘‘ಮೈಕಲ್ ಕೋಹನ್ ಕಾಂಗ್ರೆಸ್‌ನಲ್ಲಿ ನೀಡಿದ ಸಾಕ್ಷಕ್ಕೆ ಸಂಬಂಧಿಸಿ ‘ಬಝ್‌ಫೀಡ್’ ಮಾಡಿದ ವರದಿ ನಿಖರವಾಗಿಲ್ಲ’’ ಎಂದು ಮಲ್ಲರ್‌ರ ವಕ್ತಾರ ಪೀಟರ್ ಕಾರ್ ಶುಕ್ರವಾರ ರಾತ್ರಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಗುರುವಾರ ರಾತ್ರಿ ‘ಬಝ್‌ಫೀಡ್’ ವರದಿ ಪ್ರಕಟಗೊಂಡ ಬಳಿಕ, ಕಾಂಗ್ರೆಸ್‌ನ ಡೆಮಾಕ್ರಟಿಕ್ ಸದಸ್ಯರು ಟ್ರಂಪ್‌ರನ್ನು ಟೀಕಿಸಿದ್ದರು.

ತನಿಖೆಗೆ ಸಂಬಂಧಿಸಿ ಈವರೆಗೆ ಮಲ್ಲರ್ ಆಗಲಿ, ಅವರ ಸಹಾಯಕರಾಗಲಿ ಸಾರ್ವಜನಿಕ ಹೇಳಿಕೆಯನ್ನು ನೀಡಿಲ್ಲ ಎನ್ನುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News