ಹೌದಿ ಬಂಡುಕೋರರಿಗೆ ಇರಾನ್‌ನಿಂದ ಅಕ್ರಮ ಇಂಧನ ಪೂರೈಕೆ: ವಿಶ್ವಸಂಸ್ಥೆಯ ಪರಿಣತರ ವರದಿ

Update: 2019-01-19 16:49 GMT

ವಿಶ್ವಸಂಸ್ಥೆ, ಜ. 19: ಯೆಮನ್‌ ನಲ್ಲಿ ಸರಕಾರದ ವಿರುದ್ಧ ಹೋರಾಡುತ್ತಿರುವ ಹೌದಿ ಬಂಡುಕೋರರಿಗೆ ಇರಾನ್ ಅಕ್ರಮವಾಗಿ ಇಂಧನ ಪೂರೈಸುತ್ತಿದೆ ಎಂದು ವಿಶ್ವಸಂಸ್ಥೆಯ ಪರಿಣತರ ನೂತನ ವರದಿಯೊಂದು ತಿಳಿಸಿದೆ.

ಯುದ್ಧನಿರತ ಎರಡೂ ಬಣಗಳು ತಮ್ಮ ಸೇನಾ ಕಾರ್ಯಾಚರಣೆಗಳು ಹಾಗೂ ಎದುರಾಳಿಗಳ ಸಾರಾಸಗಟು ಬಂಧನಗಳ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿವೆ ಎಂಬುದಾಗಿಯೂ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಅರಾಜಕತೆ ತಾಂಡವವಾಡುತ್ತಿರುವ ದೇಶವು ನಿಧಾನವಾಗಿ ‘ಮಾನವೀಯ ಬಿಕ್ಕಟ್ಟು ಹಾಗೂ ಆರ್ಥಿಕ ಪ್ರಕೋಪದತ್ತ ವಾಲುತ್ತಿದೆ ಎಂಬ ಆಘಾತಕಾರಿ ಚಿತ್ರಣವನ್ನು ಅವರು ನೀಡಿದ್ದಾರೆ.

ಈ ಯುದ್ಧದಲ್ಲಿ ಯಾವೊಂದು ಬಣವೂ ಗೆಲ್ಲುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ.

ಯೆಮನ್ ಸರಕಾರ ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ 2018ರಲ್ಲಿ ಹೌದಿ ಬಂಡುಕೋರರ ವಿರುದ್ಧ ಸಾಕಷ್ಟು ಮುನ್ನಡೆಯನ್ನು ಸಾಧಿಸಿವೆಯಾದರೂ, ದೇಶಾದ್ಯಂತ ಸರಕಾರದ ಅಧಿಕಾರವನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News