ಚೀನಾಕ್ಕೆ 1 ಲಕ್ಷ ಕೆಜಿ ಕೂದಲು ರಫ್ತು ಮಾಡಿದ ಪಾಕ್

Update: 2019-01-19 17:09 GMT

ಇಸ್ಲಾಮಾಬಾದ್, ಜ. 19: ಪಾಕಿಸ್ತಾನ ಕಳೆದ ಐದು ವರ್ಷಗಳಲ್ಲಿ 1,32,000 ಡಾಲರ್ (ಸುಮಾರು 94 ಲಕ್ಷ ರೂಪಾಯಿ) ಬೆಲೆಯ ಒಂದು ಲಕ್ಷ ಕೆಜಿ ಮಾನವ ಕೂದಲನ್ನು ಚೀನಾಕ್ಕೆ ರಫ್ತು ಮಾಡಿದೆ.

ಚೀನಾದಲ್ಲಿ ಸೌಂದರ್ಯ ಉದ್ದಿಮೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾನವ ಕೂದಲಿಗೆ ಬೇಡಿಕೆ ಹೆಚ್ಚಿದೆ.

ಅದೂ ಅಲ್ಲದೆ, ಪಾಕಿಸ್ತಾನದಲ್ಲಿ ಫ್ಯಾಶನ್‌ ಗಾಗಿ ವಿಗ್‌ ಗಳನ್ನು ಧರಿಸುವ ಪ್ರವೃತ್ತಿಯಿಲ್ಲ ಹಾಗೂ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಯೂ ಕ್ಷೀಣಿಸಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ. ಹಾಗಾಗಿ, ಕೂದಲು ರಫ್ತಿನಲ್ಲಿ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News