ಜ. 23ರಂದು ಮೈಸೂರಿನಲ್ಲಿ ಹಾರಾಡಿ ಶಾಲಾ ಮಕ್ಕಳ ನಾಟಕ ಪ್ರದರ್ಶನ

Update: 2019-01-20 11:32 GMT

ಪುತ್ತೂರು, ಜ. 20: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಣ್ಣರ ಚಿಲುಮೆ ಯೋಜನೆಯನ್ವಯ ರೂಪುಗೊಂಡ ಮಕ್ಕಳ ನಾಟಕ "ಸಾಯೋ ಆಟ : ಮತ್ತೆ ಹೇಳಿದ ಕಥೆ " ಯನ್ನು ಪುತ್ತೂರಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿನ ಮಕ್ಕಳು ನಿರತ ನಿರಂತ ಮಕ್ಕಳ ನಾಟಕ ಶಾಲೆ ಮೂಲಕ ಮೈಸೂರಿನ ಕಲಾಮಂದಿರದಲ್ಲಿ ಜ.23 ರಂದು ಪ್ರದರ್ಶಿಸಲಿದ್ದಾರೆ.

ಮಕ್ಕಳ ಎದುರಿಸುತ್ತಿರುವ ಸಮಸ್ಯೆಗಳನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿಣ್ಣರ ಚಿಲುಮೆ ಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಮ್ಮಿಕೊಂಡಿದ್ದು ಅದರನ್ವಯ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಪಾಲ್ಗೊಳ್ಳುವ ಅವಕಾಶವನ್ನು ಹಾರಾಡಿ ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ.

ಸಾಯೋ ಆಟ ನಾಟಕವನ್ನು ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಅವರು ಮತ್ತೆ ಹೇಳಿದ ಕಥೆಯಾಗಿ ರಂಗಪಠ್ಯಗೊಳಿಸಿದ್ದು ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಾಟಕವನ್ನು ನಿರ್ದೇಶಿಸಿದ್ದಾರೆ.

ನಾಟಕದಲ್ಲಿ ಪಾತ್ರಧಾರಿಗಳಾಗಿ ಹಾರಾಡಿ ಶಾಲೆಯ ಪ್ರತೀಕ್ಷಾ ಎಂ.ಬಿ., ಭೂಮಿಕಾ ಜಿ., ಅಭಿಲಾಷಾ ದೋಟ, ಲೋಕೇಶ್ವರಿ.ಬಿ, ಸೌಮ್ಯ, ಅನನ್ಯಾ ರೈ, ಅನುಶ್ರೀ, ಸೌಜನ್ಯ, ಉಷಾ, ಸೌಮ್ಯ ಪಿ., ಲಕ್ಷ್ಮಿ ಸಕಲೇಶಪುರ, ಬಿ.ಪವಿತ್ ಯು.ರೈ, ಪ್ರಜ್ವಲ್, ಪವನ್, ಯಿಷಿತ್ ವಿಲಾಸ್, ಕಶ್ಯಪ್ ಆಚಾರ್ಯ, ಶ್ರೀನಿಧಿ ಭಟ್, ರವಿ, ವಿಶ್ವಜ್ಞ ಪ್ರಸಾದ್, ಅನಿರುದ್ಧ ದೋಟ, ಧನುಶ್ ರೈ ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News