ಪ್ರತಿಯೊಬ್ಬ ಪ್ರಜೆ ರಾಷ್ಟ್ರ ರಕ್ಷಕರಾಗುವುದು ಇಂದಿನ ಅಗತ್ಯ: ಪ್ರೊ.ಯಶೋಧಾ

Update: 2019-01-20 12:28 GMT

ಶಿರ್ವ, ಜ.20: ಇಂದು ನಮ್ಮಲ್ಲಿನ ಅಕ್ರಮಣಕಾರಿ ಮನಸ್ಥಿತಿಗಳು ದೇಶವನ್ನು ಹಾಳು ಗೆಡಹಲು ಸದಾ ಕಾಯುತ್ತಿವೆ. ಇಂತಹ ಸಂದರ್ಭದಲ್ಲಿ ಯುವಜನರು ಮತ್ತು ದೇಶದ ಪ್ರಜೆಗಳು ರಾಷ್ಟ್ರರಕ್ಷಕರು ಆಗಬೇಕಾಗಿದೆ ಎಂದು ಕನ್ನಡ ವಿಭಾಗ ಮುಖ್ಯಸ್ಥೆ ಪ್ರೊ. ಯಶೋಧಾ ಅಭಿಪ್ರಾಯ ಪಟ್ಟಿದ್ದಾರೆ.

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಭಾರತ ಸೇನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿ ದ್ದರು. ಒಂದು ರಾಷ್ಟ್ರ ರಕ್ಷಣೆಯಲ್ಲಿ ಸೇನೆಯ ಪಾಲು ಮಹಾನ್ ಮತುತಿ ಸರ್ವ ಶ್ರೆಷ್ಟವಾಗಿದೆ. ಸೈನಿಕರು ಯಾವುದೇ ತಾರತಮ್ಯ ಮಾಡದೆ ಜಾತಿ ಧರ್ಮದ ಬೇಲಿಯನ್ನು ಕಿತ್ತೊಗೆದು ಮಾನವೀಯ ಧರ್ಮದ ಸಾಮಾರಸ್ಯ ಮೂರ್ತಿಗಳಾಗಿ ದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜನ್ ವಿ.ಎನ್. ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯುವಸೇನಾ ಕ್ಯಾಡೆಟ್‌ಗಳು ವಿವಿಧ ತರಬೇತಿ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಕೀರ್ತಿ, ಶ್ರವಣ್ಯ ಪೂಜಾರಿ, ದಿಕ್ಷಿತ್, ಸುಬ್ರಹ್ಮಣ್ಯ, ನಿಕಿಲ್ ಕೊಟ್ಯಾನ್, ಅಕ್ಷತಾ, ಲಿಶಾ ಅಸ್ಮಿತ ಪಿಂಟೋ, ರೊಷಿನಿ, ಜಾಕ್ಸ್‌ನ ಫ್ರಾನ್ಸಿಸ್ ಕಾಬ್ರಾಲ್, ಗಾಡ್ವಿನ್ ಕಾಬ್ರಾಲ್ ಮೋನಿಸ್, ಆಶಿಷ್ ನೆವಿಲ್ ಪಿಂಟೋ, ಕೃಷ್ಣ, ಸತ್ಯರ್ತ, ಗೌತಮ್ ಕರ್ಕೆರ, ದಿವ್ಯ, ಪೂರ್ಣಿಮ, ಪ್ರಾಪ್ತಿ ಅಮಿನ್, ಪೂಜಾಶ್ರೀ, ಅಕ್ಷತಾ, ದೀಕ್ಷಾ ದೇವಾಡಿಗ, ಮೆಲಿಶ್ ಡಿಸೋಜ, ಶೆರ್ಲಿ ವೆಲೆಂಟಿನ, ದೀಕ್ಷ, ಶಿಶ್ರದ್ಯಾ ರಾವ್, ಜಸ್ಮಿತ ಮೆಂಡೂನ್ಸ, ಸೆರಮತೆ ಮೆಕವಾನ್, ಅಮಿಶಾ, ಸಹನ ಪ್ರಭುನ್ನು ಅಭಿನಂದಿಸಲಾಯಿತು.

ಕಾಲೇಜಿನ ಎನ್‌ಸಿಸಿ ಅಧಿಕಾರಿ ಪ್ರೊ.ಲೆಫ್ಟಿನೆಂಟ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಸೆಕೆಂಡ್ ಆಫೀಸರ್ ಜಾನ್ ವಿಲಿಯಮ್ಸ್ ವಂದಿಸಿದರು. ಟೀನಾ ಡಯಾಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News