ಕಾಪು : ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವಾರ್ಷಿಕ ಪರೀಕ್ಷೆ

Update: 2019-01-20 12:59 GMT

ಕಾಪು, ಜ. 20: ಬೋರ್ಡು ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ 2018-19ನೇ  ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪರೀಕ್ಷೆ  ರವಿವಾರ ಕಾಪುವಿನಲ್ಲಿ ನಡೆಯಿತು.

ಈಗಾಗಲೇ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು ಎರಡು ಕೋರ್ಸ್‍ಗಳಾದ ಇಸ್ಲಾಮಿಕ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೋಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್‍ಗಳಿಗೆ ಪರೀಕ್ಷೆ ನಡೆಯಿತು. 

ಈ ಪರೀಕ್ಷೆಯು ರಾಜ್ಯದ 340 ಕೇಂದ್ರಗಳಲ್ಲಿ ಜರಗುತಿದ್ದು, ಪರೀಕ್ಷೆಯು 2002ನೇ ಇಸವಿಯಲ್ಲಿ ಪ್ರಾರಂಭವಾಗಿತ್ತು. ಇಸ್ಲಾಂನ ಜ್ಞಾನಗಳಿಸುವ ಎಲ್ಲಾ ಧರ್ಮೀಗರಿಗೆ ಈ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಜಮಾಅತ್ ಇಸ್ಲಾಮೀ ಹಿಂದ್ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷ ಅನ್ವರ್ ಆಲಿ ಕಾಪು ತಿಳಿಸಿದರು. 

ಪರೀಕ್ಷೆಯು ಉಡುಪಿ ಜಿಲ್ಲೆಯ ನಾರ್ತ್ ಸ್ಕೂಲ್, ಕುಂದಾಪುರದ ಅಂಜುಮಾನ್ ಶಾಲೆ, ಮಲ್ಪೆಯ ಫ್ಲವರ್ ಆಫ್ ಪ್ಯಾರಡೈಸ್ ಶಾಲೆ, ಕಾಪುವಿನ ಸಿಟಿ ಸೆಂಟರ್‍ನ ಜಮೀಯತುಲ್ ಫಲಾಹ್ ಕಚೇರಿ, ಕಾರ್ಕಳದ ಅಸ್ಸಹಾಬಾ ಕೇಂದ್ರ, ಹೂಡೆಯ ಸಾಲಿಹಾತ್ ಕ್ಯಾಂಪಸ್, ಆದಿಉಡುಪಿಯ ಮದ್ರಸಾ ನೂರುಲ್ ಹುದಾ, ಕುಕ್ಕಿಕಟ್ಟೆ ಇಂದಿರಾ ನಗರದ ಚರ್ಚ್ ಶಾಲೆ ಹಾಗೂ ಗಂಗೊಳ್ಳಿಯ ಅಂಜುಮಾನ್ ಶಾಲೆಯಲ್ಲಿ ಪರೀಕ್ಷೆ ನಡೆಯಿತು. ಮುಂದಿನ ಪರೀಕ್ಷೆ ಜ. 27ರಂದು ನಡೆಯಲಿದೆ ಎಂದು ತಿಳಿಸಿದರು.

ಕಾಪು ಬಿಐಇ ಸೆಂಟರ್ ಸಂಚಾಲಕಿ ಶಹನಾಝ್ ಕಾಪು, ಮುಹಮ್ಮದ್ ಹಾಷಿಮ್, ಮುಹಮ್ಮದ್ ಫಾರೂಕ್, ಎಸ್‍ಐಓ ಕಾಪು ವರ್ತುಲದ ಸಂಚಾಲಕ ಅನೀಸ್ ಆಲಿ, ಮುಯಸ್ಸಿರ್, ಅಬ್ದುಲ್ ಅಹದ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News