ಕಂಬಳ ನಿರಂತರವಾಗಿ ಉಳಿಯಲು ಎತ್ತುಗಳ ಯಜಮಾನರು, ಅದರ ತೀರ್ಪುಗಾರರು ಮುಖ್ಯ: ರಮಾನಾಥ ರೈ

Update: 2019-01-20 14:40 GMT

ಪುತ್ತೂರು, ಜ. 20: ತುಳು ನಾಡಿನ ಜಾನಪದ ಕ್ರೀಡೆಯಾಗಿರುವ ಕಂಬಳ ಹಿಂಸೆಯ ಕೂಟ ಎಂದು ಅದನ್ನು ನಿಲ್ಲಿಸುವ ಪ್ರಯತ್ನವಾಗಿ ಕೋರ್ಟು ಮೆಟ್ಟಲು ಏರಿದರೂ ಸಂಪ್ರದಾಯ ಬದ್ದವಾಗಿ ನಡೆಯುವ ಕಂಬಳವನ್ನು ನಿಲ್ಲಿಸಲು ಯಾರಿಂದಲೂ ಆಗಲಿಲ್ಲ. ದೇಶದಲ್ಲಿ ಬೇರೆ ಬೇರೆ ಜನಪದ ಕ್ರೀಡೆಗಳು ಆಯಾ ಕ್ಷೇತ್ರಕ್ಕೆ ಸಂಬಂಧಿಸಿ ನಡೆಯುತ್ತದೆ. ಅದೇ ರೀತಿ ಜಿಲ್ಲೆಯಲ್ಲಿ ನಡೆಯುವ ಕಂಬಳ ನಿರಂತರವಾಗಿ ಉಳಿಯಲು ಎತ್ತುಗಳ ಯಜಮಾನರು ಮತ್ತು ಅದರ ತೀರ್ಪುಗಾರರು ಮುಖ್ಯ ಎಂದರು.

ಅವರು ಶನಿವಾರ ರಾತ್ರಿ ನಡೆದ ಜಯಕರ್ನಾಟಕ ಸಂಸ್ಥಾಪಕ ಎನ್.ಮುತ್ತಪ್ಪ ರೈ ಸಾರಥ್ಯದಲ್ಲಿ ನಡೆಯುವ 26ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ ಕಂಬಳದಲ್ಲಿ ಕೋಣಗಳನ್ನು ಓಡಿಸುವುದರೊಂದಿಗೆ  ಪರಸ್ಪರ ಸೌರ್ಹಾದ ಬೆಳೆಯತ್ತದೆ. ಇಲ್ಲಿ ಆತಂಕ ಇದ್ದರೂ ಕೂಡಾ ಯಾವ ದೃಷ್ಟಿಯಿಂದಲೂ ಕಂಬಳ ನಿಲ್ಲಿಸಲು ಸಾಧ್ಯವಿಲ್ಲ. ಜಲ್ಲಿಕಟ್ಟು ಸೇರಿದಂತೆ ಬೇರೆ ಬೇರೆ ಕ್ರೀಡೆಗಳು ಇದ್ದರೂ ಸಹ ಕಂಬಳದಲ್ಲಿ ಹಿಂಸೆ ನಡೆಯುವುದಿಲ್ಲ. ಕಂಬಳ ಶಾಶ್ವತವಾಗಿ ನಡೆಯುತ್ತದೆ. ಯಾವುದೇ ಸರಕಾರ ಬಂದರೂ ಇದಕ್ಕೆ ಮಾನ್ಯತೆ ಕೊಡುವ ಕೆಲಸಕ್ಕೆ ನಾವು ಒತ್ತಾಯ ಮಾಡಲಿದ್ದೇವೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಅತೀ ಹೆಚ್ಚು ಜನಾಕರ್ಷಣೆ ಇರುವ ಕಂಬಳ ಪುತ್ತೂರಿನದ್ದು, ಆದರೆ ಇದರ ಹಿಂದೆ ಇರುವ ಕಷ್ಟಗಳ ಕುರಿತು ಜನರಿಗೆ ಮನವರಿಗೆ ಆಗಬೇಕು. ಮುಂದಿನ ಪೀಳಿಗೆಗೆ ಕಂಬಳ ಏನೆಂಬುದು ಅರ್ಥೈಸಲು ಕಂಬಳಕ್ಕಾಗಿ ಕೋಣವನ್ನು ಸಾಕುವ ಮತ್ತು ಕಂಬಳ ಮಾಡಿಸುವ ಕಷ್ಟದ ಕುರಿತು ಒಂದು ಸಣ್ಣ ಸಿನೆಮಾ ನಿರ್ಮಾಣವಾಗಬೇಕು ಎಂದು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ಮಾತನಾಡಿ ಮಕ್ಕಳಿಗೆ ಬೇಸಾಯ ಪದ್ಧತಿ ತಿಳಿ ಪಡಿಸುವ ನಿಟ್ಟಿನಲ್ಲಿ ಇಂತಹ ಜನಪದ ಕ್ರೀಡೆಯಾದ ಕಂಬಳದ ಅವಶ್ಯಕತೆ ಇದೆ. ಇಂತಹ ಕ್ರೀಡೆ ನಡೆಯುತ್ತಿದ್ದರೆ ಮನೆಯಲ್ಲಿ ಬೇಸಾಯದ ಪದ್ಧತಿಯೂ ಉಳಿಯುತ್ತದೆ ಎಂದ ಅವರು ಕಂಬಳದ ಮೂಲ ರೂವಾರಿಯಾಗಿರುವ ಎನ್.ಮುತ್ತಪ್ಪ ರೈ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬ್ರಹ್ಮ ರಥವನ್ನು ಸಮರ್ಪಣೆ ಮಾಡಿದ್ದಾರೆ. ಮುಂದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಬ್ರಹ್ಮರಥವನ್ನು ಸಮರ್ಪಣೆ ಮಾಡುವ ಕಾರ್ಯದಲ್ಲಿ ತೊಡಗಿರುವುದು ಸಂತೋಷದ ವಿಚಾರ ಎಂದರು.

ಜಯ ಕರ್ನಾಟಕದ ರಾಜ್ಯಾಧ್ಯಕ್ಷ ಚಂದ್ರಪ್ಪ ಅವರು ಮಾತನಾಡಿ ಜಯಕರ್ನಾಟಕ ಸಂಘಟನೆಯ ಹೋರಾಟದ ಫಲವಾಗಿ ಕಂಬಳಕ್ಕೆ ಜಯ ಸಿಕ್ಕಿದೆ. ವಿಶೇಷ ವಾಗಿ ಪುತ್ತೂರಿನಲ್ಲಿ ನಡೆಯುವ ಕಂಬಳ ಜಾತಿ, ಧರ್ಮ, ಭಾಷೆ ಇಲ್ಲದೆ ನಡೆಯುತ್ತಿರುವುದು ಕಂಬಳದ ಮಹತ್ವವನ್ನು ಎತ್ತಿ ಹಿಡಿದಿದೆ ಎಂದರು. ಕಳೆದ 26 ವರ್ಷಗಳಿಂದ ನಿರಂತರವಾಗಿ ನಡೆಸುತ್ತಾ ಬಂದಿರುವ ಎನ್.ಮುತ್ತಪ್ಪ ರೈ ಅವರು ಇವತ್ತು ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್‍ಗೆ ಅವಿರೋಧವಾಗಿ ಆಯ್ಕೆಗೊಂಡಿರುವುದು ಎಲ್ಲಾ ಕ್ರೀಡೆಗಳಿಗೆ ಮತ್ತಷ್ಟು ಶಕ್ತಿ ನೀಡಿದೆ ಎಂದರು.

ಕಂಬಳದ ಪ್ರಧಾನ ತೀರ್ಪುಗಾರ ಮೂಡಬಿದ್ರೆಯ ಗುಣಪಾಲ ಕಡಂಬು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಬೆಂಗಳೂರು ಸೌಂದರ್ಯ ಎಜ್ಯುಕೇಶನ್ ಟ್ರಸ್ಟ್‍ನ ಚೆಯರ್‍ಮೆನ್ ಮಂಜಪ್ಪ, ಚಲನಚಿತ್ರ ನಟ ದಿಗಂತ್,  ಬಿಗ್‍ಬಾಸ್ -5 ವಿನ್ನರ್ ರ್ಯಾಪರ್ ಚಂದನ್ ಶೆಟ್ಟಿ, ಚಲನಚಿತ್ರ ನಟಿ ನಿರೀಕ್ಷಾ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಮೂಡಬಿದ್ರೆ ಆರ್.ಕೆ.ಎಂಟರ್‍ಪ್ರೈಸಸ್‍ನ ಮಾಲಕ ರಾಮಕೃಷ್ಣ ಭಟ್, ನಿಡ್ಪಳ್ಳಿ ಗುತ್ತು ದಿ. ಜೀವಂಧರ್ ಆರಿಗ ಅವರ ಪತ್ನಿ ವಸಂತಿ ಜಿ ಆರಿಗ ಮತ್ತು ಅವರ ಪುತ್ರ ಪ್ರಮೋದ್ ಆರಿಗ ಅವರನ್ನು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕಂಬಳದ ಕೂಟದಲ್ಲಿ ಯಶಸ್ವಿಯಾಗಿ ಸಕ್ರೀಯರಾಗಿದ್ದು ನಿಧನರಾಗಿರುವ ಕೃಷ್ಣ ಶೆಟ್ಟಿ ನುಳಿಯಾಲು, ಮೂಡಬಿದ್ರೆ ಕರಿಂಜೆ ವಿಶ್ವನಾಥ ಶೆಟ್ಟಿ, ರೋಹಿತ್ ಶೆಟ್ಟಿ ಬೈಲುರು, ಪೆರುವಾಜೆ ಕಂಬಳಕೂಟದ ಅಧ್ಯಕ್ಷರಾಗಿದ್ದ ರಮೇಶ್ ಶೆಟ್ಟಿಯವರಿಗೆ ಸಭಾ ಕಾರ್ಯಕ್ರಮದ ಆರಂಭದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೇದಿಕೆಯಲ್ಲಿ ಮೂಡಬಿದ್ರೆ ಮಾಜಿ ಶಾಸಕ ಅಭಯಚಂದ್ರ ಜೈನ್, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ನಿತಿನ್ ಶೆಟ್ಟಿ ಕಾವೂರು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಅರ್ ಶೆಟ್ಟಿ,   ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಚಲನಚಿತ್ರ ನಟಿ ಪಾಯಳ್, ಕಾಣತ್ತೂರು ನಾಲ್ವರ್ ಕ್ಷೇತ್ರದ ಮಹಾಲಿಂಗ ನಾಯರ್, ಕಡಬ ಸಿ.ಎ ಬ್ಯಾಂಕ್‍ನ ರಮೇಶ್ ಕಲ್ಪುರೆ, ಉದ್ಯಮಿ ಮಹಮ್ಮದ್ ಕುಕ್ಕುವಳ್ಳಿ, ರೋಹಿತ್ ಮಾರ್, ಪಿ.ಬಿ.ದಿವಾಕರ್ ರೈ, ಮಾರಪ್ಪ ಶೆಟ್ಟಿ ಬೈಲುಗುತ್ತು, ಕೋಡಿಯಾಡಿ ಸಂಕಪ್ಪ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಎನ್.ಕರುಣಾಕರ ರೈ, ಆಲಂಕಾರು ಶರವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ರೈ, ಪ್ರಧಾನ ತೀರ್ಪುಗಾರ ಎಂ.ರಾಜೀವ ಶೆಟ್ಟಿ ಎಡ್ತೂರು, ಡಿವೈಎಸ್ಪಿ  ದಿನಕರ್ ಶೆಟ್ಟಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಸಂದೀಪ್ ಅರಿಯಡ್ಕ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಜಿ.ಪಂ ಸದಸ್ಯರಾದ ಎಮ್.ಎಸ್ ಮಹಮ್ಮದ್, ಪಿ.ಪಿ.ವರ್ಗೀಸ್, ಸವೋತ್ತಮ ಗೌಡ, ತಾ.ಪಂ ಸದಸ್ಯೆ ಉಷಾ ಅಂಚನ್, ಉದ್ಯಮಿ ಸುಜಿತ್ ಕುಮಾರ್ ಶೆಟ್ಟಿ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉತ್ತರ ವಲಯದ ಮಾಜಿ ನಿರ್ದೇಶಕ ನವೀನ್ ಭಂಡಾರಿ, ಕೆಪಿಸಿಸಿ ಸದಸ್ಯರಾದ ಎಂ.ಬಿ.ವಿಶ್ವನಾಥ ರೈ, ಡಾ. ರಘು ಬೆಳ್ಳಿಪ್ಪಾಡಿ, ಜಯಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ರಾಮಚಂದ್ರ, ರಾಜ್ಯ ಉಪಾಧ್ಯಕ್ಷ ಆರ್.ಮುನಿಸ್ವಾಮಿ, ಜೊತೆ ಕಾರ್ಯದರ್ಶಿ ಡಿ.ವಿ.ಜಗದೀಶ್, ಬೆಂಗಳೂರು ನಗರ ಜಯಕರ್ನಾಟಕದ ಅಧ್ಯಕ್ಷ ಕೆ.ಎನ್. ಜಗದೀಶ್, ಉಡುಪಿ ಜಿಲ್ಲೆಯ ಜಯಕರ್ನಾಟಕ ಅಧ್ಯಕ್ಷ ಸತೀಶ್ ಪೂಜಾರಿ, ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಂದ್ರ ನಾಥ ಆಳ್ವ, ಉದ್ಯಮಿ ಮನ್ವಿತ್ ಶೆಟ್ಟಿ ಬೆಂಗಳೂರು, ಶಿವರಾಮ ಆಳ್ವ, ಪಡ್ನೋಟ್ಟು ವಿಶ್ವನಾಥ ಶೆಟ್ಟಿ, ಹರೀಶ್ ಶೆಟ್ಟಿ ಕಡಬ, ಪ್ರವೀಣ್ ಶೆಟ್ಟಿ ಅಳಕೆಮಜಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತ ಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ಕೋಟಿ -ಚೆನ್ನಯ ಜೋಡುಕರೆ ಕಂಬಳ ಫಲಿತಾಂಶ

ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆದ 26 ನೇ ವರ್ಷದ ಕೋಟಿ -ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳ ಕೂಟದ ವಿವಿಧ ವಿಭಾಗಗಳಲ್ಲಿ ಒಟ್ಟು 131 ಜತೆ ಕೋಣಗಳು ಭಾಗವಹಿಸಿದ್ದವು. 

ಫಲಿತಾಂಶ ಹೀಗಿವೆ:
ಕನೆಹಲಗೆ : 
ಬಿ.ಸಿ.ರೋಡು ಪಲ್ಲಮಜಲು ರಾಕೇಶ್ ಮಲ್ಲಿ (6.5 ಕೋಲು ನಿಶಾನಿಗೆ ನೀರು ಹಾಯಿಸಿ)
ಹಲಗೆ ಮೆಟ್ಟಿದವರು - ನಾರಾವಿ ಯುವರಾಜ ಜೈನ್ 
ವಾಮಂಜೂರು ತಿರುವೈಲುಗುತ್ತು ನವೀನ್‍ಚಂದ್ರ ಆಳ್ವ (6.5 ಕೋಲು ನಿಶಾನಿಗೆ ನೀರು ಹಾಯಿಸಿ)
ಹಲಗೆ ಮೆಟ್ಟಿದವರು -ಬೈಂದೂರು ಭಾಸ್ಕರ ದೇವಾಡಿಗ
ಹಗ್ಗ ಹಿರಿಯ :
ಪ್ರಥಮ - ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ 
ಓಡಿಸಿದವರು - ಪಣಪೀಲು ಪ್ರವೀಣ್ ಕೋಟ್ಯಾನ್
ದ್ವಿತೀಯ - ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ 
ಓಡಿಸಿದವರು -ಕೊಳಕೆ ಇರ್ವತ್ತೂರು ಆನಂದ
ಹಗ್ಗ ಕಿರಿಯ : 
ಪ್ರಥಮ -ಮಾಣಿಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ 
ಓಡಿಸಿದವರು -ಪಣಪೀಲಿ ಪ್ರವೀಣ್ ಕೋಟ್ಯಾನ್
ದ್ವಿತೀಯ -ಕಾಂತಾವರ ಅಂಬೋಡಿಮಾರು ರಘುನಾಥ ದೇವಾಡಿಗ ಎ 
ಓಡಿಸಿದವರು - ಅತ್ತೂರು ಕೊಡಂಗೆ ಸುಧೀರ್ ಸಾಲ್ಯಾನ್
ಅಡ್ಡಹಲಗೆ : 
ಪ್ರಥಮ -ಬೋಳಾರ ತ್ರಿಶಾಲ್ ಕೆ. ಪೂಜಾರಿ 
ಓಡಿಸಿದವರು -ಮಂದಾರ್ತಿ ಶಿರೂರು ಗೋಪಾಲ ನಾಯ್ಕ
ದ್ವಿತೀಯ -ಸಂಕರ್ಚಾಲು ಶ್ರೀನಿವಾಸ ಬಿರ್ಮಣ್ಣ ಶೆಣೈ 
ಓಡಿಸಿದವರು -ನಾರಾವಿ ಯುವರಾಜ್ ಜೈನ್
ನೇಗಿಲು ಹಿರಿಯ : 
ಪ್ರಥಮ -ಬೋಳದಗುತ್ತು ಜಗದೀಶ್ ಶೆಟ್ಟಿ ಎ 
ಓಡಿಸಿದವರು -ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ
ದ್ವಿತೀಯ - ಬೋಳದಗುತ್ತು ಜಗದೀಶ್ ಶೆಟ್ಟಿ ಬಿ 
ಓಡಿಸಿದವರು -ಮರೋಡಿ ಶ್ರೀಧರ
ನೇಗಿಲು ಕಿರಿಯ :
ಪ್ರಥಮ -ಮಿಜಾರು ಪ್ರಸಾದ ನಿಲಯ ಪ್ರಸಿದ್ದ್ ಶಕ್ತಿಪ್ರಸಾದ್ ಶೆಟ್ಟಿ 
ಓಡಿಸಿದವರು -ಬಾರಾಡಿ ಸತೀಶ್ ಕುಮಾರ್
ದ್ವಿತೀಯ -ಬಾರ್ಯ ಬಳ್ಳಿದಡ್ಡ ಗುತ್ಯಂಡ ಪರಮೇಶ್ವರ ಡೊಂಬಯ್ಯ ಗೌಡ 
ಓಡಿಸಿದವರು -ಮರೋಡಿ ಶ್ರೀಧರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News