ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ನಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ 'ಕಾನ್ಫಿಡೆನ್ಸ್ ಟೆಸ್ಟ್'

Update: 2019-01-21 04:27 GMT

ಸುರತ್ಕಲ್, ಜ.21: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ 'ಕಾನ್ಫಿಡೆನ್ಸ್ ಟೆಸ್ಟ್'  ಕೃಷ್ಣಾಪುರದ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ನಡೆಯಿತು.

 ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯ ಆರಿಫ್ ಝುಹ್ರಿ ದುಆ ನೆರವೇರಿಸಿದರು. ಅಲ್ ಬದ್ರಿಯಾ ಶಾಲೆಯ ಅಧ್ಯಕ್ಷ ಬಿ.ಎ.ನಝೀರ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ಅಧ್ಯಕ್ಷ ಉಮರುಲ್ ಫಾರೂಖ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. 

ಅಲ್ ಬದ್ರಿಯಾ ಶಾಲೆಯ ಸಂಚಾಲಕ ಎಂ.ಎಸ್.ಹಮೀದ್, ಪ್ರ.ಕಾರ್ಯದರ್ಶಿ ಬಿ.ಎ.ಇಕ್ಬಾಲ್ ಮಾತನಾಡಿದರು.

ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲೆಗಳ 110 ವಿದ್ಯಾರ್ಥಿಗಳು ಕಾನ್ಫಿಡೆನ್ಸ್ ಟೆಸ್ಟ್‌ನಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಮಾಜಿ ರಾಜ್ಯ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಕಿಷ್ಣಾಪುರ,  ದ.ಕ. ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ರಫೀಕ್, ಡಿವಿಷನ್ ಉಪಾಧ್ಯಕ್ಷರಾದ ಫಾರೂಖ್ ಅಹ್ಸನಿ, ಹರ್ಷದ್ ಸಖಾಫಿ, ಡಿವಿಷನ್ ನಾಯಕರಾದ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ, ಅಬ್ದುಲ್ಲಾ ತಮೀಮ್, ಕೃಷ್ಣಾಪುರ, ಮುಹಮ್ಮದ್ ಮೂಸ,  ಹನೀಫ್ ಅಹ್ಸನಿ, ಶೇಡಿಗುರಿ,  ಡಿವಿಜನ್ ಕೋಶಾಧಿಕಾರಿ ರಿಝ್ವಾನ್, 7ನೇ ಬ್ಲಾಕ್ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಮಾಜಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಹಾಜಿ ಸ್ವಾಗತಿಸಿದರು. ಡಿವಿಜನ್ ಕಾರ್ಯದರ್ಶಿ ಹೈದರ್ 4ನೇ ಬ್ಲಾಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News