ಸಿದ್ದಗಂಗಾ ಶ್ರೀ ಗಳಿಗೆ ಕರಾವಳಿಯ ನಂಟು

Update: 2019-01-21 18:00 GMT

ಮಂಗಳೂರು, ಜ.21: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಕರಾವಳಿಯಲ್ಲಿಯೂ ಭಕ್ತರಿದ್ದಾರೆ. ಅದಕ್ಕಿಂತಲೂ ಅವರ ಬಗ್ಗೆ ಗೌರವ ಅಭಿಮಾನ ಹೊಂದಿರುವ ಜನಸಮೂಹವಿದೆ. ಅದಕ್ಕೆ ಉದಾಹರಣೆ ಎಂಬಂತೆ ಕರಾವಳಿಗೆ ಸುಮಾರು ಮೂರು ಬಾರಿ ಭೇಟಿ ನೀಡದ್ದಾಗ ಅಪಾರ ಜನ ಸಮೂಹ ಅವರನ್ನು ಸ್ವಾಗತಿಸಿರುವುದನ್ನು ಆಗಿನ ಜನಸಾಮಾನ್ಯರು ನೆನಪಿಸುತ್ತಾರೆ.

ಸಿದ್ದಗಂಗಾ ಶ್ರೀಗಳು 1962ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಅಲ್ಲಿ ಬಸವಣ್ಣನ ಕಾಯಕ ದಾಸೋಹದ ಬಗ್ಗೆ ಸಂದೇಶ ನೀಡಿದವರು. ಬಳಿಕ 1969ರಲ್ಲಿ ಧರ್ಮಸ್ಥಳದ ಉಜಿರೆಯ ಎಸ್‌ಡಿಎಂ ಕಾಲೇಜಿನ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನುವುದನ್ನು ಕರಾವಳಿಯ ಹಿರಿಯ ನಾಗರಿಕರು ನೆನಪಿಸಿಕೊಳ್ಳುತ್ತಾರೆ.

ಸಿದ್ದ ಗಂಗಾ ಶ್ರೀಗಳ ನಿಧನಕ್ಕೆ ಕರಾವಳಿಯ ಬಹುತೇಕ ಎಲ್ಲಾ ಪಕ್ಷಗಳ ರಾಜಕಾರಣಿಗಳು ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News