ಸಜಿಪನಡು: ವಾರ್ಷಿಕ ದಫ್ ರಾತೀಬ್ ಪ್ರಯುಕ್ತ ಜ.24 ರಿಂದ ಧಾರ್ಮಿಕ ಮತಪ್ರಭಾಷಣ

Update: 2019-01-22 12:05 GMT

ಬಂಟ್ವಾಳ,ಜ.22: ರಿಯಾಳುಲ್ ಇಸ್ಲಾಂ ದಫ್ ಕಮೀಟಿ ಸಜಿಪನಡು ಇದರ ವತಿಯಿಂದ 43ನೇ ವಾರ್ಷಿಕ ರಿಫಾಈ ದಫ್ ರಾತೀಬ್, ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ 4 ದಿವಸಗಳ ಧಾರ್ಮಿಕ ಮತಪ್ರಭಾಷಣ ಜ.24 ರಿಂದ ಜ.27 ರವರೆಗೆ ಸಜಿಪನಡು ಮುಹ್ಯಿದ್ದೀನ್ ಮಸೀದಿ ವಠಾರದಲ್ಲಿ ನಡೆಯಲಿದೆ.

ಜ.24 ರಂದು ಕೆ.ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಜ.25 ರಂದು ರಹ್ಮತುಲ್ಲಾ ಖಾಸಿಮಿ ಮುತ್ತೇಡಂ, ಜ.26 ರಂದು ಎನ್.ಎಂ ಅಶ್ಫಾಕ್ ಫೈಝಿ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಜ.27 ರಂದು ಬೆಳಗ್ಗೆ ರಿಯಾಳುಲ್ ಇಸ್ಲಾಂ ದಫ್ ಕಮೀಟಿ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಸ್ಸಯ್ಯದ್ ಅಲೀ ತಂಙಲ್ ಕುಂಬೋಳ್ ಕಟ್ಟಡದ ಉದ್ಘಾಟನೆ ಹಾಗೂ ದುಆಶೀರ್ವಚನ ಗೆಯ್ಯಲಿದ್ದಾರೆ. ಅದೇ ದಿನ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಸ್ಸಯ್ಯದ್ ಅತಾವುಲ್ಲಾ ತಂಙಲ್ ಎಮ್.ಎ ಉದ್ಯಾವರ ಭಾಗವಹಿಸಲಿದ್ದಾರೆ ಎಂದು ರಿಯಾಳುಲ್ ಇಸ್ಲಾಂ ದಫ್ ಕಮೀಟಿ ಅಧ್ಯಕ್ಷ ಹಾಜಿ ಎಸ್.ಅಬ್ಬಾಸ್ ಹಾಜಿ, ಕಾರ್ಯದರ್ಶಿ ಆರಿಫ್ ಸಜಿಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News