1984ರ ಸಿಕ್ಖ್ ವಿರೋಧಿ ದಂಗೆ: ಸಜ್ಜನ್ ಕುಮಾರ್‌ಗೆ ವಾರಂಟ್

Update: 2019-01-22 16:30 GMT

ಹೊಸದಿಲ್ಲಿ, ಜ. 22: ಸಿಕ್ಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿ ಜನವರಿ 28ರಂದು ಹಾಜರಾಗುವಂತೆ ಕಾಂಗ್ರೆಸ್‌ನ ಮಾಜಿ ನಾಯಕ ಸಜ್ಜನ್ ಕುಮಾರ್‌ಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ವಾರಂಟ್ ಜಾರಿ ಮಾಡಿದೆ. ಇನ್ನೊಂದು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸಜ್ಜನ್ ಕುಮಾರ್ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಆದರೆ, ಜೈಲಿನ ಆಡಳಿತಾಧಿಕಾರಿಗಳು ಸಜ್ಜನ್ ಕುಮಾರ್‌ರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಪೂನಮ್ ಬಂಬಾ ಸಜ್ಜನ್ ಕುಮಾರ್ ವಿರುದ್ಧ ವಾರಂಟ್ ಹೊರಡಿಸಿದರು. ವಿಚಾರಣಾ ನ್ಯಾಯಾಲಯದಲ್ಲಿರುವ ಈ ಪ್ರಕರಣದಲ್ಲಿ ಸುಲ್ತಾನ್‌ಪುರಿಯಲ್ಲಿ ಸುರ್ಜೀತ್ ಸಿಂಗ್ ಅವರ ಕೊಲೆಯಾಗಲು ಕಾರಣವಾದ ಗಲಭೆ, ಹತ್ಯೆ ಆರೋಪವನ್ನು ಸಜ್ಜನ್ ಕುಮಾರ್, ಬ್ರಹ್ಮಾನಂದ ಗುಪ್ತಾ ಹಾಗೂ ವೇದ್ ಪ್ರಕಾಶ್ ಎದುರಿಸುತ್ತಿದ್ದಾರೆ. 1984 ಅಕ್ಟೋಬರ್ 31ರಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರು ಗುಂಡು ಹಾರಿಸಿ ಹತ್ಯೆಗೈದ ಬಳಿಕ ಗಲಭೆ ಸ್ಫೋಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News