ರಾಜೀವ್ ಪ್ರತಾಪ್ ರೂಡಿಗೆ ಯಶವಂತ್ ಸಿನ್ಹಾ ತರಾಟೆ

Update: 2019-01-22 16:36 GMT

ಪಾಟ್ನಾ, ಜ. 22: ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿಯ ಅಸಂತುಷ್ಟ ನಾಯಕ ಶತ್ರುಘ್ನ ಸಿನ್ಹಾ, ಉಪೇಕ್ಷೆಗೆ ಒಳಗಾದ ಕಾರಣಕ್ಕೆ ತೀವ್ರ ಒತ್ತಡಕ್ಕೆ ಒಳಗಾಗಿರುವ ರೂಢಿಯ ಬಗ್ಗೆ ನನಗೆ ಅನುಕಂಪ ಇದೆ ಎಂದಿದ್ದಾರೆ.

ಕೊಲ್ಕತ್ತಾದಲ್ಲಿ ಪ್ರತಿಪಕ್ಷಗಳು ಆಯೋಜಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡ ಸಿನ್ಹಾ, ರಾಷ್ಟ್ರ ನಾಯಕರಾದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಕಟುವಾಗಿ ಟೀಕಿಸಿದ್ದರು ಹಾಗೂ ಸತ್ಯ ಹೇಳಿದರೆ ಬಂಡಾಯಕೋರ ಎಂದು ಹೇಳುವುದಾದರೆ, ಹಾಗೇ ಪರಿಗಣಿಸಲಿ ಎಂದಿದ್ದರು. “ನನ್ನ ಹಳೆಯ ಗೆಳೆಯ ಹಾಗೂ ಪಕ್ಷದ ಯುವ ವಕ್ತಾರ ನನ್ನ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ನಾನು ಅಚ್ಚರಿಗೊಂಡೆ” ಎಂದು ಅವರು ಹೇಳಿದರು. “ಪಕ್ಷದಲ್ಲಿ ಉಪೇಕ್ಷೆಗೆ ಒಳಗಾಗಿರುವುದರಿಂದ ನನ್ನ ಗೆಳೆಯ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ” ಎಂದು ಕೆಲವರು ಹೇಳಿದರು. ಈ ರೀತಿಯ ಹೇಳಿಕೆ ನೀಡುವ ಒತ್ತಡಕ್ಕೆ ಒಳಗಾಗಿರುವಂತೆ ಕಾಣುವ ಅವರ ಬಗ್ಗೆ ನಮಗೆ ಆನುಕಂಪೆ ಇದೆ. ಅವರು ತನ್ನ ಅಸ್ತಿತ್ವವ ಕಾಪಾಡಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿರುವ ಸಾಧ್ಯತೆ ಇದೆ ಎಂದು ಸಿನ್ಹಾ ಹೇಳಿದ್ದಾರೆ.

 ಸಿನ್ಹಾ ಬುದ್ಧಿವಂತ ಹಾಗೂ ಅವಕಾಶವಾದಿ ಎಂದು ಉಲ್ಲೇಖಿಸಿದ್ದ ರೂಡಿ, ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಸಂಸತ್ತಿನಲ್ಲಿ ವಿಪ್ ಜಾರಿ ಮಾಡಿದಾಗ ಸಿನ್ಹಾ ಪಕ್ಷದ ಪರವಾಗಿ ನಿಲ್ಲುತ್ತಾರೆ. ಕೋಲ್ಕೊತ್ತಾರ ರ್ಯಾಲಿಯಲ್ಲಿ ಸಿನ್ಹಾ ಪಾಲ್ಗೊಂಡಿರುವುದನ್ನು ಬಿಜೆಪಿ ಪರಿಗಣಿಸಿದೆ ಹಾಗೂ ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಭರವಸೆ ನನಗಗಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News