ಭಟ್ಕಳ: ಲಯನ್ಸ್ ಕ್ಲಬ್ ನಿಂದ ಅಲೆಮಾರಿ ಕುಟುಂಬಕ್ಕೆ ಜೀವನಾವಶ್ಯಕ ವಸ್ತುಗಳ ವಿತರಣೆ

Update: 2019-01-22 18:32 GMT

ಭಟ್ಕಳ, ಜ. 22: "ಲಯನ್ಸ್ ರೈಸ್ ಬ್ಯಾಗ್ ಚ್ಯಾಲೇಂಜ್" ಕಾರ್ಯಕ್ರಮದಡಿಯಲ್ಲಿ ಲಯನ್ಸ್ ಕ್ಲಬ್ ಮುರ್ಡೇಶ್ವರದ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಆರ್.ಎನ್.ಎಸ್. ಆಸ್ಪತ್ರೆ ಎದುರಿಗಿರುವ ಅಲೆಮಾರಿ ಜನಾಂಗದ ಕುಟುಂಬದವರಿಗೆ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿದರು.

ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಸಂಸ್ಥಾಪಕರಾದ ಮೆಲ್ವಿನ್ ಜೋನ್ಸ್ ಅವರ ಹುಟ್ಟು ಹಬ್ಬದ ನಿಮಿತ್ತ ಕ್ಲಬ್‍ನ ಅಧ್ಯಕ್ಷ ನಾಗರಾಜ ಭಟ್ಟ ಅವರ ನೇತೃತ್ವದಲ್ಲಿ ಪದಾಧಿಕಾರಿಗಳೂ ಹಾಗೂ ಸದಸ್ಯರು ಅಲೆಮಾರಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ 100 ಕಿ.ಗ್ರಾಂ ಅಕ್ಕಿ, 25 ಕಿ.ಗ್ರಾಂ ಬೇಳೆ, 20 ಕಿ.ಗ್ರಾಂ ಬೆಲ್ಲ ಹಾಗೂ 20 ಕಿ.ಗ್ರಾಂ ತರಕಾರಿಗಳನ್ನು ನೀಡಿದರು.

ಹಸ್ತಾಂತರಿಸುವ ಸಮಯದಲ್ಲಿ ಲಯನ್ಸ್ ಕ್ಲಬ್ ಬೆಳ್ಮಣ್, ಮಂಗಳೂರು ಇದರ ಪದಾಧಿಕಾರಿಗಳು, ಮುರ್ಡೇಶ್ವರ ಕ್ಲಬ್‍ನ ಕಾರ್ಯದರ್ಶಿ ನಾಗೇಶ ಮಡಿವಾಳ, ಖಜಾಂಚಿ ಜಗದೀಶ ಜೈನ್, ಎರಡನೇ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಗಿರೀಶ ಕುಚಿನಾಡ, ಲಯನ್ ಎಸ್.ಜೆ.ಖೈರನ್ ಹಾಗೂ ಮುರ್ಡೇಶ್ವರ ಕ್ಲಬ್‍ನ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News