ಭಟ್ಕಳ: ಸಿದ್ದಗಂಗಾ ಶ್ರೀ ನಿಧನಕ್ಕೆ ರಾಬ್ತಾ ಮಿಲ್ಲತ್ ಸಂತಾಪ

Update: 2019-01-22 18:42 GMT

ಭಟ್ಕಳ, ಜ. 22: ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ಎ.ಪಿ. ಮುಜಾವರ್, ಪ್ರಧಾನ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಹಾಗೂ ಕಾರ್ಯದರ್ಶಿ ಸಾರ್ವಜನಿಕ ಸಂಪರ್ಕ ಎಂ.ಆರ್.ಮಾನ್ವಿ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸಿದ್ಧಗಂಗಾ ಶ್ರೀಗಳು ದೇಶದ ಒಂದು ಶಕ್ತಿಯಾಗಿ ಬದುಕಿದರು, ಅವರ ನಿಸ್ವಾರ್ಥ ಮನುಷ್ಯಪ್ರೇಮ, ಎಲ್ಲ ಜಾತಿ ಧರ್ಮದವರಿಗೆ ಅವರು ನೀಡಿದ ಶಿಕ್ಷಣ ಅವರು ಓರ್ವ ವ್ಯಕ್ತಿಯಾಗದೆ ದೇಶದ ಶಕ್ತಿಯಾಗಿದ್ದರು ಎನ್ನುವುದನ್ನು ಸಾಬೀತು ಮಾಡಿ ತೋರಿಸಿದೆ. ತಮ್ಮ ಇಡೀ ಬದುಕೆ ಸಮಾಜಕ್ಕೆ ಮೀಸಲಿಟ್ಟು ಧಾರ್ಮಿಕ ಸೌಹಾರ್ದತೆಯನ್ನು ಮೆರೆದರು. 

ಸಮಾಜವನ್ನು ಜನರ ಒಂದು ಗುಂಪಾಗಿ ಅವರು ನೋಡಿರುವರೇ ಹೊರತು ಹಿಂದೂ ಮುಸ್ಲಿಂ ಆಗಿ ಅಲ್ಲ. ಈ ಗುಣವೇ ಅವರನ್ನು ಅನನ್ಯಗೊಳಿಸಿದೆ.ಅವರ ನಿಧನವು ಈ ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರು ಪ್ರತಿಪಾದಿಸಿದ ಸೌಹಾರ್ದ ಸಮಾಜ ಕಾರ್ಯರೂಪಕ್ಕೆ ಬರಲಿ ಮತ್ತು ಅವರ ಪರಿವಾರ, ಅಭಿಮಾನಿ ವರ್ಗಕ್ಕೆ ಅವರ ಅನುಪಸ್ಥಿತಿಯನ್ನು ಸಹಿಸುವ ಸಾಮಥ್ರ್ಯವನ್ನು ದೇವನು  ದಯಪಾಲಿಸಲಿ ಪ್ರಾರ್ಥಿಸಿರುವ ಸಂಸ್ಥೆಯ ಮುಖಂಡರು, ಅವರೊಂದು ಸರ್ಕಾರದಂತೆ ಕಾರ್ಯನಿರ್ವಹಿಸಿದರು. ಅನ್ನದಾನ ಮತ್ತು ವಿದ್ಯಾದಾನದ ಮೂಲಕ ಲಕ್ಷಾಂತರ ಮಂದಿ ಹೊಟ್ಟೆಯ ಹಸಿವು ಮತ್ತು ಮೆದುಳಿನ ಹಸಿವನ್ನು ತಣಿಸಿದರು. ಆದ್ದರಿಂದ ಭಾರತ ಸರಕಾರವು ಅವರಿಗೆ  ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News