2019-20ರಲ್ಲೂ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಸಂಸ್ಥೆ

Update: 2019-01-23 17:21 GMT

ಹೊಸದಿಲ್ಲಿ,ಜ.23: 2019 ಮತ್ತು 2020ರಲ್ಲೂ ಭಾರತ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯಲಿದ್ದು, ಚೀನಾಕ್ಕಿಂತ ಬಹಳ ಮುಂದಿರಲಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ದೃಷ್ಟಿಕೋನ (ಡಬ್ಲೂಇಎಸ್‌ಪಿ) 2019ರ ಪ್ರಕಾರ, 2019-20ರಲ್ಲಿ ಭಾರತದ ಜಿಡಿಪಿ ದರವು 2019ರ ಮಾರ್ಚ್‌ಗೆ ಕೊನೆಗೊಳ್ಳುವ ಆರ್ಥಿಕ ವರ್ಷದ ಅಂದಾಜು ಶೇ.7.4ಕ್ಕಿಂತ ಹೆಚ್ಚಾಗಿ ಶೇ.7.6ಕ್ಕೆ ತಲುಪಲಿದೆ. ಆದರೆ ನಂತರದ ವರ್ಷದಲ್ಲಿ ಈ ದರ ಮತ್ತೆ ಶೇ.7.4ಕ್ಕೆ ಕುಸಿಯುವ ಸಾಧ್ಯತೆಯಿದೆ. ಇದೇ ವೇಳೆ ಚೀನಾ ಆರ್ಥಿಕ ಬೆಳವಣಿಗೆಯು 2019ರಲ್ಲಿ 2018ರ ಶೇ.6.6ರಿಂದ ಕುಸಿದು ಶೇ.6.3ಕ್ಕೆ ತಲುಪಲಿದೆ. 2020ರಲ್ಲಿ ಇದು ಮತ್ತಷ್ಟು ಕುಸಿದು ಶೇ.6.2ಕ್ಕೆ ಕುಸಿಯಲಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಆರ್ಥಿಕತೆಯು 2019 ಮತ್ತು 2020ರಲ್ಲಿ ಶೇ.3ರ ವೇಗದಲ್ಲಿ ಸ್ಥಿರವಾಗಿ ಬೆಳೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News