​ಮಾಣಿ : ವಿದ್ಯುತ್ ಸುರಕ್ಷತಾ ಮಾಸಾಚರಣೆ

Update: 2019-01-25 06:04 GMT

ವಿಟ್ಲ, ಜ. 25: ವಿದ್ಯುತ್ ಸುರಕ್ಷತೆ ಬಗ್ಗೆ ಅರಿತುಕೊಳ್ಳುವುದರ ಜೊತೆಗೆ ಅವಶ್ಯಕತೆಗನುಗುಣವಾಗಿ ವಿದ್ಯುತ್ತನ್ನು ಬಳಸಿರಿ ಎಂದು  ಬಂಟ್ವಾಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ರಾಮಚಂದ್ರ ಕರೆ ನೀಡಿದರು.

ಮಾಣಿ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳೂರು ವಿದ್ಯುಚ್ಛಕ್ತಿ  ಸರಬರಾಜು ಕಂಪನಿ ನಿಯಮಿತ ಮಾಣಿ ಶಾಖಾ ಕಚೇರಿ ವತಿಯಿಂದ ನಡೆದ ''ವಿದ್ಯುತ್ ಸುರಕ್ಷತಾ ಮಾಸಾಚರಣೆ - 2019" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಟ್ಲ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಜೋಶಿ ವಿದ್ಯುತ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.

ಶಾಲಾಡಳಿತ ಮಂಡಳಿ ಅದ್ಯಕ್ಷ ಕಿರಣ್ ಹೆಗ್ಡೆ, ಕೋಶಾಧಿಕಾರಿ ಜಗನ್ನಾಥ ಚೌಟ, ಕಾರ್ಯದರ್ಶಿ ಕೆ ಇಬ್ರಾಹಿಂ, ಸದಸ್ಯರಾದ ಸನತ್ ಕುಮಾರ್ ಜೈನ್, ಬಾಲಕ್ರಷ್ಣ ಆಳ್ವ, ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವೀಂದ್ರ ಶೆಟ್ಟಿ,ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಕೆ.ಭಂಡಾರಿ, ಮೆಸ್ಕಾಂ ವಿಟ್ಲ ಶಾಖಾಧಿಕಾರಿ ಸತೀಶ್, ಸಾಲೆತ್ತೂರು ಶಾಖಾಧಿಕಾರಿ ದೇವಿ ಕಿರಣ್, ಮೆಸ್ಕಾಂ ಅಧಿಕಾರಿಗಳಾದ ಭರತ್, ಆನಂದ, ನೆಲ್ಸನ್, ವಿದ್ಯುತ್ ಗುತ್ತಿಗೆದಾರರಾದ ಅಬ್ಬಾಸ್ ನೇರಳಕಟ್ಟೆ, ಸತೀಶ್, ಕಾಲೇಜು ವಿದ್ಯಾರ್ಥಿ ನಾಯಕ ಗ್ಲೇಸನ್ ಜಾಯ್ ಥೋರಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಣಿ ಶಾಖಾಧಿಕಾರಿ ದಿನೇಶ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News