ಸುರತ್ಕಲ್ ರೇಂಜ್ ಮಟ್ಟದ ವಿದ್ಯಾರ್ಥಿ ಫೆಸ್ಟ್ ಉದ್ಘಾಟನೆ

Update: 2019-01-25 06:23 GMT

ಮುಲ್ಕಿ, ಜ. 25: ಸಮಸ್ತದ ಮದ್ರಸಗಳ ಒಕ್ಕೂಟವಾದ ರೇಂಜ್ ಜಂಹಿಯ್ಯತ್ತುಲ್ ಮುಹಲ್ಲಿಂ ವತಿಯಿಂತ ಸುರತ್ಕಲ್ ರೇಂಜ್ ಮಟ್ಟದ ವಿದ್ಯಾರ್ಥಿ ಫೆಸ್ಟ್ ಕಾರ್ಯಕ್ರಮ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಮೇನೇಜ್ ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಅಧ್ಯಕ್ಷತೆ ವಹಿಸಿದರು. ಚೊಕ್ಕಬೊಟ್ಟು ಯು ಕೆ ದಾರಿಮಿ ಉದ್ಘಾಟಿಸಿ ಪ್ರತಿಭೆಯನ್ನು ಒರೆಗೆ ಹಚ್ಚುವ ಈ ಕಾರ್ಯಕ್ರಮ ಅತ್ಯಂತ ಫಲಕಾರಿಯಾಗಿದೆ ಎಂದರು.

ಖತೀಬ್ ಯಸ್ ಬಿ ದಾರಿಮಿ ಪ್ರಸ್ತಾವಿಕ ಮಾತನಾಡಿ ಪಕ್ಷಿ ಪ್ರಾಣಿಗಳಲ್ಲಿ ಜನ್ಮತಃ ಅವುಗಳಿಗೆ ಬೇಕಾದ ಸಂಪನ್ಮೂಲಗಳು ಇದ್ದರೆ ಮನುಷ್ಯನು ಅದನ್ನು ಶ್ರಮ ವಹಿಸಿ ಗಳಿಸಬೇಕಾಗಿದೆ. ಇಂತಹ ವಿದ್ಯಾರ್ಥಿ ಫೆಸ್ಟ್  ಕಾರ್ಯಕ್ರಮಗಳು ಅದಕ್ಕೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಲಿಯಾಕತ್ ಅಲಿ, ಜಿಲ್ಲಾ ಮೇನೇಜ್ ಮೆಂಟ್ ಅಧ್ಯಕ್ಷ ಐ ಮೊಯಿದಿನಬ್ಬ ಹಾಜಿ, ಅಮಾನುಲ್ಲಾ ನುಸ್ರತ್,  ರಝಾಕ್ ಮುಲ್ಕಿ, ಹಸನ್ ಬಾವ, ನಝೀರ್ ವಳಚ್ಚಿಲ್, ಇಮ್ತಿಯಾಝ್ ಇಡ್ಯಾ, ಹನೀಪ್ ಇಡ್ಯಾ, ಇಬ್ರಾಹಿಮ್ ಬೊಳ್ಳೂರು, ರಝಾಕ್ ಮದಕಿನ್ ಮೊದಲಾದವರು ಭಾಗವಹಿಸಿದ್ದರು.

ಹನೀಫ್ ದಾರಿಮಿ ಇಡ್ಯಾ ಸ್ವಾಗತಿಸಿ, ಬೈತಡ್ಕ ಅಬ್ದುಲ್ಲ ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News