×
Ad

6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದಾತನಿಗೆ 30 ವರ್ಷಗಳ ಕಠಿಣ ಶಿಕ್ಷೆ

Update: 2019-01-25 19:56 IST

ಕೊಚ್ಚಿ,ಜ.25: ಆರು ವರ್ಷದ ಬಾಲಕಿಗೆ ನರ್ಸರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಮೂವತ್ತು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಕೋರ್ಟುತೀರ್ಪು ನೀಡಿದೆ. ಪಟ್ಟಿಮಟ್ಟಂ ಕುಮ್ಮನೊಡ್ ಎಂಬಲ್ಲಿನ ಅಬ್ದುಲ್ ಮಜೀದ್(42)ಗೆ ಎರ್ನಾಕುಳಂ ಅಡಿಶನಲ್ ಸೆಶನ್ಸ್ (ಮಹಿಳೆಯರು, ಮಕ್ಕಳ ವಿರುದ್ಧ ದೌರ್ಜನ್ಯ ವಿಚಾರಣೆ ನಡೆಸುವ ವಿಶೇಷ ಕೋರ್ಟು) ನ್ಯಾಯಾಧೀಶ ಪಿ.ಜೆ. ವಿನ್ಸಂಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

2016 ಜೂನ್ 25ರಂದು ಘಟನೆ ನಡೆದಿತ್ತು. ಪಟ್ಟಿಮಟ್ಟಂಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮೂರು ವಿಭಾಗದಲ್ಲಿ ಒಟ್ಟು ಮೂವತ್ತು ವರ್ಷಗಳ ಶಿಕ್ಷೆ ನೀಡಲಾಗಿದ್ದು ಒಟ್ಟಿಗೆ ಹತ್ತು ವರ್ಷಗಳ ಶಿಕ್ಷೆ ಅನುಭವಿಸಿದರೆ ಸಾಕಾಗುತ್ತದೆ.

ಪ್ರತಿಯೊಂದು ವಿಭಾಗದಲ್ಲಿ ತಲಾ ಹತ್ತು ಸಾವಿರ ರೂಪಾಯಿಯಂತೆ 30,000 ರೂಪಾಯಿ ದಂಡ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಮೂರು ವರ್ಷ ಹೆಚ್ಚುವರಿಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಆರೋಪಿ ದಂಡದಮೊತ್ತ ನೀಡಿದರೆ ಕಿರುಕುಳಕ್ಕೊಳಗಾದ ಬಾಲಕಿಗೆ ಅದನ್ನು ಕೊಡಬೇಕು. ಬಾಲಕಿ ಸಹಿತ 13 ಸಾಕ್ಷಿಗಳನ್ನುವಿಚಾರಣೆಗೆ ಪರಿಗಣಿಸಲಾಗಿತ್ತು. ಹತ್ತು ದಾಖಲೆಗಳನ್ನು ಪೊಲೀಸರು ಹಾಜರು ಪಡಿಸಿದ್ದರು. 

ಬಾಲಕಿಗೆ ಇನ್ನಷ್ಟು ಪರಿಹಾರ ಸಿಗುವಂತಾಗಲು ವಿಕ್ಟಿಂಕಾಂಪನ್‍ಸೇಶನ್ ಆ್ಯಕ್ಟ್ ಪ್ರಕಾರ ತೀರ್ಪಿನ ಪ್ರತಿಯನ್ನು ಜಿಲ್ಲಾಲೀಗಲ್ ಸರ್ವಿಸ್ ಅಥಾರಿಟಿಗೆ ಹಸ್ತಾಂತರಿಸಬೇಕೆಂದು ಕೋರ್ಟು ನಿರ್ದೇಶಿಸಿದೆ. ಸ್ಪೆಶಲ್ಪ್ರಾಸಿಕ್ಯೂಟರ್ ಬಿ.ಸಂಧ್ಯಾ ರಾಣಿ ಪ್ರಾಸಿಕ್ಯೂಶನ್ ಪರ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News