ಬಿಜೆಪಿ ಆಭ್ಯರ್ಥಿಯಾಗಲು ನಟ ಮೋಹನ್‍ಲಾಲ್ ಸಮ್ಮತಿಸಿಲ್ಲ: ನಟ ಸುರೇಶ್ ಗೋಪಿ

Update: 2019-01-25 14:40 GMT

ತಿರುವನಂತಪುರಂ,ಜ.25: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ನಟ ಮೋಹನ್ ಲಾಲ್ ಈವರೆಗೂ ಒಪ್ಪಿಗೆನೀಡಿಲ್ಲ. ಇದೇವೇಳೆ ತನ್ನನ್ನುಅಭ್ಯರ್ಥಿಯಾಗಿಸುವ ವಿಷಯದ ಕುರಿತು ಏನೂ ಗೊತ್ತಿಲ್ಲ ಎಂದು ನಟ ಸುರೇಶ್ ಗೋಪಿ ಹೇಳಿದರು.ಚುನಾವಣೆಯಲ್ಲಿ ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ಸಿನೆಮಾ ತಾರೆಯರನ್ನುಕಣಕ್ಕಿಳಿಸಲಿದೆ ಎಂದು ಪ್ರಚಾರ ನಡೆಯುತ್ತಿದೆ.

ಮೋಹನ್ ಲಾಲ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಆರಂಭದಿಂದಲೇ ವದಂತಿ ಹಬ್ಬಿತ್ತು. ಅವರ ಹೆಸರನ್ನು ಅಭ್ಯರ್ಥಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು.ಕೆಲವು ತಿಂಗಳ ಹಿಂದೆ ತನ್ನ ತಂದೆ, ತಾಯಿಯ ಹೆಸರಿನಲ್ಲಿರುವ ಟ್ರಸ್ಟ್‍ನ ವಿಷಯದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ನಂತರಮೋಹನ್ ಲಾಲ್ ಬಿಜೆಪಿಗೆ ನಿಕಟವಾಗುತ್ತಿದ್ದಾರೆ ಎಂಬ ಪ್ರಚಾರ ಗರಿಕೆದರಿಕೊಂಡಿತ್ತು.

ತಿರುವನಂತಪುರಂನಲ್ಲಿ ಮೋಹನ್‍ಲಾಲ್ ಸ್ಪರ್ಧಿಸಿದರೆ ಗೆಲ್ಲುತ್ತಾರೆ ಎಂದು ಬಿಜೆಪಿಗೆ ಭರವಸೆಯಿದೆ. ಆದರೆ ಕುಂಞಲಿ ಮರಕ್ಕಾರ್ ಸಿನೆಮಾದಲ್ಲಿ ಅವರುಬ್ಯುಸಿಯಾಗಿದ್ದಾರೆ. ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಸಂದೇಶವನ್ನು ಕೂಡ ಪರೋಕ್ಷವಾಗಿ ಅವರು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

 ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಮೋಹನ್‍ಲಾಲ್ ಹೇಳಿದ್ದರೂ ಕೊನೆಯ ಪ್ರಯತ್ನ ಎಂಬ ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಮೂಲಕ ಒತ್ತಡಹಾಕಿಸುವ ಯತ್ನ ನಡೆಯುತ್ತಿದೆ. ಲೋಕಸಭೆಗೆ ಸ್ಪರ್ಧಿಸದಿದ್ದರೆ ರಾಜ್ಯಸಭಾ ಸದಸ್ಯನಾಗಿ ಮಾಡುವ ಯತ್ನ ಬಿಜೆಪಿ ನಡೆಸುತ್ತಿದೆ.

ಮೋಹನ್ ಲಾಲ್ ಅಲಭ್ಯವಾದರೆ ತಿರುವನಂತಪುರಂನಿಂದ ಸುರೇಶ್‍ಗೋಪಿಯ ಹೆಸರು ಪರಿಶೀಲನೆಯಲ್ಲಿದೆ. ಹಲವರ ಜೊತೆ ತನ್ನ ಹೆಸರು ಪ್ರಚಾರದಲ್ಲಿದೆಎಂಬುದನ್ನು ಬಿಟ್ಟು ಬೇರೇನೂ ತನಗೆ ಗೊತ್ತಿಲ್ಲ ಎಂದು ಸುರೇಶ್ ಗೋಪಿ ಹೇಳಿದರು. ಕೊಲ್ಲಂನಿಂದಲೂ ಅವರ ಹೆಸರು ಕೇಳಿ ಬರುತ್ತಿದೆ. ಗೋಪಿ ರಾಜ್ಯಸಭಾಸದಸ್ಯರಾಗಿದ್ದು ಇನ್ನು ಮೂರುವರೆ ವರ್ಷ ಕಾಲ ಅವರ ಸದಸ್ಯತ್ವ ಅವಧಿ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News