×
Ad

ಅಂಡಮಾನ್‌ನಲ್ಲಿ ಭಾರತದ ಕಣ್ಗಾವಲು ನೆಲೆ: ಹೆಚ್ಚಿನ ಮಹತ್ವ ನೀಡದಿರಲು ಚೀನಾ ನಿರ್ಧಾರ

Update: 2019-01-25 21:28 IST

ಬೀಜಿಂಗ್, ಜ. 25: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರತ ನಿರ್ಮಿಸಿರುವ ಕಣ್ಗಾವಲು ನೆಲೆಗೆ ಹೆಚ್ಚಿನ ಮಹತ್ವ ನೀಡದಿರಲು ಚೀನಾ ನಿರ್ಧರಿಸಿದೆ.

ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾ ಪಡೆಯ ಹೆಚ್ಚುತ್ತಿರುವ ಚಲನವಲನಗಳ ಮೇಲೆ ನಿಗಾ ಇಡಲು ಈ ನೆಲೆಯನ್ನು ಸ್ಥಾಪಿಸಲಾಗಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಣ್ಗಾವಲು ನೆಲೆಯನ್ನು ಸ್ಥಾಪಿಸಲು ಭಾರತಕ್ಕೆ ಅಧಿಕಾರವಿದೆ ಎಂದು ಹೇಳಿದೆ.

ಚೀನಾ ಮತ್ತು ಜಾಗತಿಕ ಸಮುದ್ರ ವ್ಯಾಪಾರಕ್ಕೆ ಮಹತ್ವದ್ದಾಗಿರುವ ಕಿರಿದಾದ ಜಲಪ್ರದೇಶ ಮಲಕ್ಕ ಜಲಸಂಧಿಗೆ ಸಮೀಪದಲ್ಲಿ ನೆಲೆಯನ್ನು ಸ್ಥಾಪಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.

ಚೀನಾ ಈ ದಾರಿಯ ಮೂಲಕ ತನ್ನ ಯುದ್ಧ ನೌಕೆಗಳನ್ನು ಹಿಂದೂ ಮಹಾಸಾಗರಕ್ಕೆ ಹಾಗೂ ನೆರೆಯ ದೇಶಗಳಿಗೆ ಕಳುಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News